Mini Tractor Subsidy Scheme: ರೈತರಿಗೆ ಟ್ರಾಕ್ಟರನ್ನು ಖರೀದಿ ಮಾಡಲು ಸರ್ಕಾರದಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಇಂದಿನ ಕೃಷಿ ಯಂತ್ರೋಪಕರಣ ಬಳೆಗೆ ಈಗ ಅತ್ಯಂತ ಅಗತ್ಯವಾದ ಮಾಹಿತಿ ಎಂದು ಹೇಳಿದರ ತಪ್ಪಾಗುವುದಿಲ್ಲ. ವಿಶೇಷವಾಗಿ ಈಗ ಸಣ್ಣ ಮತ್ತು ಅಲ್ಪಭೂಮಿ ಹೊಂದಿರುವಂತ ರೈತರಿಗೆ ಈಗ ದೊಡ್ಡ ಟ್ರ್ಯಾಕ್ಟರ್ ಗಳನ್ನು ಬಳಕೆ ಮಾಡುವುದು ದುಬಾರಿಯಾಗುತ್ತದೆ. ಈ ಒಂದು ಕಾರಣದಿಂದಾಗಿ ಈಗ ನಮ್ಮ ಸರ್ಕಾರ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯ ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆ ಮೂಲಕ ರೈತರು ಕಡಿಮೆ ವೆಚ್ಚದಲ್ಲಿ ಈಗ ಮಿನಿ ಟ್ರ್ಯಾಕ್ಟರ್ ಗಳನ್ನು ಖರೀದಿ ಮಾಡಿ ಕೃಷಿಯನ್ನು ಈಗ ಸುಲಭವಾಗಿ ಮತ್ತು ಲಾಭದಾಯಕವಾಗಿ ಮಾಡಿಕೊಳ್ಳಬಹುದಾಗಿದೆ.

ಈಗ ಸ್ನೇಹಿತರೆ ನೀವು ಕೂಡ ಈಗ ಈ ಒಂದು ಯೋಜನೆಗೆ ಮೂಲಕ ಸಬ್ಸಿಡಿ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ. ಇದನ್ನು ಈ ಲೇಖನದಲ್ಲಿ ನೀಡಿರುವ ಅರ್ಹತೆಗಳು, ಸಬ್ಸಿಡಿ ವಿವರಗಳು ಹಾಗೂ ಬೇಕಾಗುವ ದಾಖಲೆಗಳು ಹಾಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಸಬ್ಸಿಡಿ ಯೋಜನೆಯ ಮಾಹಿತಿ
ಈಗ ಮಿನಿ ಟ್ರಾಕ್ಟರ್ ಸಬ್ಸಿಡಿ ಯೋಜನೆ ಎಂದರೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಮಿನಿ ಟ್ರಾಕ್ಟರ್ ಖರೀದಿ ಮಾಡಲು ಈಗ ಸರಕಾರದಿಂದ ಆರ್ಥಿಕ ಸಹಾಯ ಧನವನ್ನು ನೀಡಲಾಗುತ್ತದೆ. ಈಗ ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರದ ಕೃಷಿ ಇಲಾಖೆ ಹಾಗೂ ಕರ್ನಾಟಕದ ಕೃಷಿ ಇಲಾಖೆಯ ಮೂಲಕ ಜಾರಿಗೆ ಮಾಡಲಾಗಿದೆ. ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಕೃಷಿಯಾಂತೀಕರಣವನ್ನು ಹೆಚ್ಚಿಗೆ ಮಾಡುವುದು. ಹಾಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಗೆ ಮಾಡುವುದು. ಅಷ್ಟೇ ಅಲ್ಲದೆ ರೈತರು ಕೆಲಸದ ಒತ್ತಡ ಕಡಿಮೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಸಬ್ಸಿಡಿ ಎಷ್ಟು?
ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಸಾಮಾನ್ಯ ರೈತರಿಗೆ ಈಗ 25% ರಿಂದ 40% ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.
ಆನಂತರ SC/ST ರೈತರು ಈಗ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅವರಿಗೆ 50 ರಿಂದ 60% ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಗರಿಷ್ಠ 1.20 ಲಕ್ಷದಿಂದ 2.5 ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತದೆ.
ಅರ್ಹತೆಗಳು ಏನು?
- ಭಾರತೀಯ ನಾಗರಿಕರು ಆಗಿರಬೇಕು.
- ಕರ್ನಾಟಕದ ಶಾಶ್ವತ ನಿವಾಸಿಗಳು ಆಗಿರಬೇಕು.
- ಹಾಗೆ ಅವರು ರೈತ ಅಥವಾ ಕೃಷಿಕರು ಆಗಿರಬೇಕಾಗುತ್ತದೆ.
- ಆನಂತರ ಈಗಾಗಲೇ ರೈತರು ಟ್ರ್ಯಾಕ್ಟರ್ ಹೊಂದಿರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಮೀನಿನ ದಾಖಲೆಗಳು
- ಮೊಬೈಲ್ ನಂಬರ್
- ಇಮೇಲ್ ಐಡಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
ಅರ್ಜಿ ಸಲ್ಲಿಸುವುದು ಹಗೆ?
ಈಗ ಸ್ನೇಹಿತರೆ ನೀವು ಕೂಡ ಈ ಒಂದು ಮಿನಿ ಟ್ಯಾಕ್ಟರ್ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಇಲ್ಲವೇ ನಿಮ್ಮ ಹತ್ತಿರ ಇರುವ ತಾಲೂಕು ಕೃಷಿ ಕಚೇರಿಗಳಿಗೆ ಭೇಟಿಯನ್ನು ನೀಡಿ. ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಉಚಿತ ಟ್ರ್ಯಾಕ್ಟರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಬಹುದು.