Yuvanidhi Yojane Update News: ಯುವನಿಧಿ ಯೋಜನೆ ಹಣ ಪಡೆಯಬೇಕಾದರೆ ಈ ನಿಯಮಗಳು ಕಡ್ಡಾಯ! ಸರ್ಕಾರದಿಂದ ಹೊಸ ನಿಯಮ ಬಿಡುಗಡೆ!
ಈಗ ನಮ್ಮ ಕರ್ನಾಟಕ ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ಈಗ ಕಾಂಗ್ರೆಸ್ ಸರ್ಕಾರವು ನೀಡಿತ್ತು. ಆ ಒಂದು 5 ಗ್ಯಾರಂಟಿ ಯೋಜನೆಗಳಲ್ಲಿ ಈಗ ಯುವ ನಿಧಿ ಯೋಜನೆ ಕೂಡ ಒಂದು. ಈ ಒಂದು ಯೋಜನೆಯಲ್ಲಿ ಈಗ ನಮ್ಮ ರಾಜ್ಯ ಸರ್ಕಾರಈಗ ದೊಡ್ಡ ಬದಲಾವಣೆ ಮಾಡಲು ಈಗ ತೀರ್ಮಾನವನ್ನು ತೆಗೆದುಕೊಂಡಿದ್ದೆದೆ. ಹಾಗಿದ್ದರೆ ಈಗ ರಾಜ್ಯ ಸರ್ಕಾರವು ನೀಡಿರುವಂತಹ ಬದಲಾವಣೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಯುವನಿಧಿ ಯೋಜನೆಯ ಮಾಹಿತಿ
ಈಗ ನಮ್ಮ ರಾಜ್ಯದಲ್ಲಿ 2023 ವಿಧಾನಸಭೆ ಚುನಾವಣೆ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದಾಗಿ ಈಗ ನಮ್ಮ ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು. ಹಾಗೆ ಈ ಒಂದು ಗ್ಯಾರಂಟಿ ಯೋಜನೆಗಳಲ್ಲಿ ಈ ಯುವನಿಧಿ ಯೋಜನೆ ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈಗ ಈ ಒಂದು ಯುವ ನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಯುವಕರಿಗೆ ಹಾಗೂ ಮಹಿಳೆಯರಿಗೆ ಈ ಒಂದು ಯೋಜನೆಯ ಮೂಲಕ ಪದವೀಧರರಿಗೆ ಈಗ ಪ್ರತಿ ತಿಂಗಳ 3000 ಹಣವನ್ನು ಹಾಗೂ ಡಿಪ್ಲೋಮಾ ಐಟಿಐ ಪಾಸಾದಂತ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 1500 ಹಣವನ್ನು ನೀಡುವಂತಹ ಯೋಜನೆ ಇದಾಗಿದೆ.
ಆದರೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡುಲು ಈಗ ಸರ್ಕಾರ ಮುಂದಾಗಿದೆ. ಹಾಗಿದ್ದರೆ ಈಗ ಸರ್ಕಾರವು ಬದಲಾವಣೆ ಮಾಡಿರುವಂತಹ ನಿಯಮ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಯುವನಿಧಿ ಯೋಜನೆ ಸ್ವಯಂಘೋಷಣೆ ಮಾಹಿತಿ
ಈಗ ರಾಜ್ಯ ಸರ್ಕಾರವು ಒಂದು ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳ ಹಣವನ್ನು ಪಡೆಯಲು ಈಗ ತ್ರೈಮಾಸಿಕ ಅಥವಾ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಅಧಿಕೃತ ಜಾಲತಾಣದ ಮೂಲಕ ಅಪ್ಲೋಡ್ ಮಾಡಲು ಆದೇಶವನ್ನು ಮಾಡಿತ್ತು. ಆದರೆ ಈಗ ಸರ್ಕಾರ ಈ ಒಂದು ನಿಯಮವನ್ನು ಈಗ ಬದಲಾವಣೆ ಮಾಡಿದ್ದು ಮತ್ತೆ ಈಗ ಪ್ರತಿ ತಿಂಗಳು ಕೂಡ ಈ ಒಂದು ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಲು ಹಾಗೂ ದೃಢೀಕರಿಸಬೇಕೆಂದು ಈಗ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.
ಅದೇ ರೀತಿಯಾಗಿ ಈ ಒಂದು ಯುವನಿಧಿ ಯೋಜನೆ ಅಡಿಯಲ್ಲಿ ಸತತವಾಗಿ ಕಳೆದ ಆರು ತಿಂಗಳಿನಿಂದ ಹಣ ಪಡೆಯುತ್ತಿರುವ ಫಲಾನುಭವಿಗಳು ತರಬೇತಿಯನ್ನು ಪಡೆದುಕೊಳ್ಳಲು ನಾವು ಈ ಕೆಳಗೆ ನೀಡಿರುವ ಅಧಿಕೃತ ಜಾಲತಾಣದ ಮೂಲಕ ನೋಂದಾವಣೆಯನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ನೋಂದಾಯಿಸಿಕೊಂಡಂತ ಫಲಾನುಭವಿಗಳಿಗೆ ಯಾವುದೇ ರೀತಿ ಈ ಒಂದು ಯೋಜನೆ ಹಣವನ್ನು ನಿಲ್ಲಿಸುವುದಿಲ್ಲ ಎಂದು ಈಗ ಜಿಲ್ಲಾ ಉದ್ಯಮ ವಿನಿಮಯ ಕೇಂದ್ರ ಮಾಹಿತಿಯನ್ನು ನೀಡಿದೆ.
ಫಲಾನುಭವಿಗಳ ಆಧಾರ ಕಾರ್ಡ್ ಅಪ್ಡೇಟ್
ಈಗ ನೀವೇನಾದರೂ ಈ ಒಂದು ಯುವನಿಧಿ ಯೋಜನೆಯ ಫಲಾನುಭವಿಗಳು ಆಗಿದ್ದರೆ ಕಡ್ಡಾಯವಾಗಿ ನೀವು ನಿಮ್ಮ ಆಧಾರ ಕಾರ್ಡ್ ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ. ಈಗ ಒಂದು ವೇಳೆ ನೀವೇನಾದರೂ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ ಹತ್ತು ವರ್ಷ ಕಳೆದಿದ್ದರೆ ನೀವು ಅದನ್ನು ಇದುವರೆಗೂ ಕೂಡ ಅಪ್ಡೇಟ್ ಮಾಡಿಸದಿದ್ದರೆ ಕೂಡಲೇ ಅಪ್ಡೇಟನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನಿಮಗೆ ಈ ಒಂದು ಯೋಜನೆ ಹಣ ಬಂದು ತಲುಪುತ್ತದೆ.
ಅರ್ಜಿ ಸಲ್ಲಿಸಲು ಅರ್ಹರು ಯಾರು
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ 2024 ಮತ್ತು 25 ನೇ ಸಾಲಿನಲ್ಲಿ ಪದವಿಯನ್ನು ಪಾಸಾದಂತ ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮಾ ಐಟಿಐ ಪಾಸಾದಂತ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈಗ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು ಹಣವನ್ನು ಪಡೆದುಕೊಳ್ಳಬಹುದಾಗಿದೆ.