Simple Marriage Incentive For 50000: ರಾಜ್ಯ ಸರ್ಕಾರದಿಂದ ವಿವಾಹಕ್ಕೆ ಈಗ 50,000 ಪ್ರೋತ್ಸಾಹಧನ ಘೋಷಣೆ! ಈಗಲೇ ಅರ್ಜಿ ಸಲ್ಲಿಸಿ.

Simple Marriage Incentive For 50000: ರಾಜ್ಯ ಸರ್ಕಾರದಿಂದ ವಿವಾಹಕ್ಕೆ ಈಗ 50,000 ಪ್ರೋತ್ಸಾಹಧನ ಘೋಷಣೆ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ನಮ್ಮ ಕರ್ನಾಟಕ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯ ಗಳಿಗೆ ಈಗ ಸರಳ ವಿವಾಹವನ್ನು ಉತ್ತೇಜಿಸುವ ಉದ್ದೇಶದಿಂದ ಈ ಒಂದು ಮಹತ್ವದ ಯೋಜನೆಯನ್ನು ಈಗ ಜಾರಿಗೆ ಮಾಡಿದೆ. ಹಾಗೆ ಈಗ 2025 26 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಒಂದು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಯೋಜಿಸಿದಂತಹ ಸಾಮೂಹಿಕ ವಿವಾಹಗಳಿಗೆ ಈಗ ಪ್ರತಿ ಜೋಡಿಗಳಿಗೆ ಈಗ 50,000 ವರೆಗೆ ಆರ್ಥಿಕ ಸಹಾಯವನ್ನು ಘೋಷಣೆ ಮಾಡಿದ್ದಾರೆ.

ಈ ಒಂದು ಯೋಜನೆಗೆ ಆರ್ಥಿಕವಾಗಿ ದುರ್ಬಲವಾಗಿರುವ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಗೌರವಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಿವಾಹವನ್ನು ನಡೆಸುವ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಶರತ್ತುಗಳು ಏನು ಹಾಗೂ ಸಂಪರ್ಕದ ಮಾಹಿತಿ ಬಗ್ಗೆ ಈ ಒಂದು ಲೇಖನದಲ್ಲಿ ಎಲ್ಲಾ ಮಾಹಿತಿ ಇದೆ.

ಯೋಜನೆ ಉದ್ದೇಶ ಏನು?

ಈಗ ನಮ್ಮ ಕರ್ನಾಟಕ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವಂತ ಅಲ್ಪಸಂಖ್ಯಾತ ಸಮುದಾಯದವರಿಗೆ ಸರಳ ವಿವಾಹವನ್ನು ಉತ್ತೇಜಿಸುವ ಸಲುವಾಗಿ ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ. ಈಗ ಸಾಮೂಹಿಕ ವಿವಾಹಗಳ ಕಾರ್ಯಕ್ರಮಗಳ ಮೂಲಕ ಸ್ವಯಂ ಸೇವಾ ಸಂಸ್ಥೆಗಳು ಆಯೋಜಿಸುವಂತಹ ವಿವಾಹಗಳಿಗೆ ಈಗ ಸರ್ಕಾರವು ಪ್ರತಿ ಜೋಡಿ 50,000 ಆರ್ಥಿಕ ಸಹಾಯಧನವನ್ನು ನೀಡಲಾಗುತ್ತಿದೆ. ಈ ಒಂದು ಯೋಜನೆಯು ಈಗ ಸರಳತೆಯನ್ನು ಉತ್ತೇಜಿಸುವುದರ ಜೊತೆಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವಂತಹ ಗುರಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಈಗ ನಮ್ಮ ಕೊಡಗು ಜಿಲ್ಲೆಗೆ ಈಗ ಈ ಒಂದು ಯೋಜನೆ ಅಡಿಯಲ್ಲಿ 40 ಜೋಡಿಗಳಿಗೆ ಸಹಾಯಧನವನ್ನು ಈಗ ಗುರಿಯನ್ನು ಹೊಂದಿದೆ.

ಈಗ ಈ ಒಂದು ಯೋಜನೆಯು ಮುಸ್ಲಿಂ, ಕ್ರಿಶ್ಚಿಯನ್ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೀಮಿತವಾಗಿರುತ್ತದೆ. ಹಾಗೆ ಈ ಒಂದು ಸಮುದಾಯಗಳಿಗೆ ಸೇರಿದಂತವರು ಹಾಗೆ ಆರ್ಥಿಕವಾಗಿ ಹಿಂದುಳಿದಿರುವಂತ ಜನರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರಬೇಕು ಎಂಬುದು ಶರತ್ತು ಇದೆ.

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಆಗಿರಬೇಕು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ ಸಮುದಾಯದವರು ಆಗಿರಬೇಕು.
  • ಹಾಗೆ ವಧುವಿನ ವಯಸ್ಸು 18 ವರ್ಷದಿಂದ 42 ವರ್ಷದವರೆಗೆ ಹಾಗೂ ವರನ ವಯಸ್ಸು ಕನಿಷ್ಠ 21 ವರ್ಷದಿಂದ 45 ವರ್ಷದ ಒಳಗೆ ಇರಬೇಕಾಗುತ್ತದೆ.
  • ಹಾಗೆ ವಧು-ವರರ ವಾರ್ಷಿಕ ಆದಾಯವು 2.30 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಅದೇ ರೀತಿಯಾಗಿ ವರನಿಗೆ ಈಗಾಗಲೇ ಯಾವುದೇ ರೀತಿಯಾದಂತಹ ಜೀವಂತ ಪತ್ನಿ ಇರಬಾರದು. ಹಾಗೆ ವದುವಿಗೂ ಕೂಡ ಜೀವಂತ ಪತಿ ಇರಬಾರದು.
  • ಹಾಗೆಯೇ ಕಾರ್ಯ ಈ ಒಂದು ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನು?

ಒಂದು ಯೋಜನೆ ಅಡಿಯಲ್ಲಿ ಆರ್ಥಿಕ ಸಹಾಯವನ್ನು ಪಡೆಯಲು ಈಗ ಅರ್ಹ ಜೋಡಿಗಳು ತಮ್ಮ ಅರ್ಜಿಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಈಗ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಸ್ಥೆಗಳು ಅರ್ಜಿಗಳನ್ನು ಸಂಗ್ರಹಣೆ ಮಾಡಿಕೊಂಡು ಸರಕಾರಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತವೆ. ಹಾಗೆ ನೀವು ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ಷರತ್ತುಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಅದಕ್ಕೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಹಾಗೆ ಈ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನೀವು ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ಈ ಒಂದು ಅರ್ಜಿಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment

error: Content is protected !!