PM Vidyalakshmi Scheme: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ.ವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ 

PM Vidyalakshmi Scheme: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ.ವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ 

ಈಗ ಸ್ನೇಹಿತರೇ ಇಂದಿನ ಕಾಲದಲ್ಲಿ ಉನ್ನತ ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿದೆ. ಆದರೆ ಹೆಚ್ಚುತ್ತಿರುವ ಕಾಲೇಜು ಶುಲ್ಕ, ಪುಸ್ತಕಗಳ ವೆಚ್ಚ, ಹಾಸ್ಟೆಲ್ ಮತ್ತು ಇತರೆ ಖರ್ಚುಗಳ ಕಾರಣದಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸನ್ನು ಅರ್ಧದಲ್ಲೇ ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲು ಕೇಂದ್ರ ಸರ್ಕಾರವು ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಅನ್ನು ಜಾರಿಗೆ ತಂದಿದೆ.

PM Vidyalakshmi Scheme

ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ರೂಪಾಯಿವರೆಗೆ ಶಿಕ್ಷಣ ಸಾಲ ಪಡೆಯಬಹುದಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುವ ಅತ್ಯಂತ ಮಹತ್ವದ ಯೋಜನೆಯಾಗಿದೆ.

ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಮಾಹಿತಿ 

ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಭಾಗವಾಗಿ ಜಾರಿಗೆ ತರಲಾಗಿದ್ದು, ದೇಶದ ಯಾವುದೇ ವಿದ್ಯಾರ್ಥಿ ಹಣದ ಕೊರತೆಯಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಹೊಂದಿದೆ.

ಈ ಯೋಜನೆಯ ಮೂಲಕ ಭಾರತದಲ್ಲಿನ ಹಾಗೂ ವಿದೇಶದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯ ಮೂಲಕ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ಅರ್ಜಿ ಪ್ರಕ್ರಿಯೆ ಸರಳ, ಪಾರದರ್ಶಕ ಮತ್ತು ವೇಗವಾಗಿ ಪೂರ್ಣಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಯೋಜನೆಯ ಉದ್ದೇಶ ಏನು? 

  • ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ನೀಡುವುದು.
  • ಪ್ರತಿಭಾವಂತ ಯುವಕರಿಗೆ ಹಣದ ಅಡಚಣೆ ಇಲ್ಲದೆ ಶಿಕ್ಷಣ ಪಡೆಯಲು ನೆರವು ನೀಡುವುದು.
  • ಶಿಕ್ಷಣ ಸಾಲ ಪ್ರಕ್ರಿಯೆಯನ್ನು ಡಿಜಿಟಲ್ ಮತ್ತು ಪಾರದರ್ಶಕಗೊಳಿಸುವುದು.
  • ದೇಶದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ ಆಗಿದೆ.

ಪ್ರಮುಖ ಪ್ರಯೋಜನಗಳು

  • ಗರಿಷ್ಠ 10 ಲಕ್ಷ ರೂ.ವರೆಗೆ ಶಿಕ್ಷಣ ಸಾಲ ಪಡೆಯಬಹುದು.
  • ಯಾವುದೇ ಆಸ್ತಿ, ಚಿನ್ನ ಅಥವಾ ವ್ಯಕ್ತಿಗಳ ಗ್ಯಾರಂಟಿ ಅಗತ್ಯವಿಲ್ಲ.
  • ಬೋಧನಾ ಶುಲ್ಕ, ಪುಸ್ತಕಗಳು, ಲ್ಯಾಪ್‌ಟಾಪ್, ಹಾಸ್ಟೆಲ್ ಮತ್ತು ಇತರೆ ಶಿಕ್ಷಣ ಸಂಬಂಧಿತ ಖರ್ಚುಗಳಿಗೆ ಸಾಲ ಬಳಕೆ ಮಾಡಬಹುದು.
  • ಬ್ಯಾಂಕ್ ಮೂಲಕ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ.

ಬಡ್ಡಿಯ ಮಾಹಿತಿ 

ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಮತ್ತೊಂದು ವಿಶೇಷ ಅಂಶವೆಂದರೆ ಬಡ್ಡಿ ರಿಯಾಯಿತಿ

  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇದ್ದರೆ 3% ಬಡ್ಡಿ ರಿಯಾಯಿತಿ ನೀಡಲಾಗುತ್ತದೆ.
  • ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ರೂ. ಒಳಗಡೆ ಇದ್ದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುತ್ತದೆ.
  • ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವಾಗುತ್ತದೆ.

ಯಾರಿಗೆ ಎಲ್ಲ ಈ ಯೋಜನೆಯ ಲಾಭ 

  • ಭಾರತ ದೇಶದ ನಾಗರಿಕರಾಗಿರುವ ವಿದ್ಯಾರ್ಥಿಗಳು ಆಗಿರಬೇಕು.

  • ಮಾನ್ಯತೆ ಪಡೆದ ಕಾಲೇಜು / ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದವರು ಆಗಿರಬೇಕು.

  • ಪದವಿ, ಸ್ನಾತಕೋತ್ತರ, ವೃತ್ತಿಪರ ಮತ್ತು ವಿದೇಶಿ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸಾಲ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
  • ನಂತರ ನೀವು ಹೊಸ ಬಳಕೆದಾರರಾಗಿದ್ದರೆ ನೋಂದಣಿ ಮಾಡಿ.
  • ಅನಂತರ ಬೇಕಾಗುವ ವೈಯಕ್ತಿಕ ಮತ್ತು ಶಿಕ್ಷಣ ವಿವರಗಳನ್ನು ಭರ್ತಿ ಮಾಡಿ.
  • ಬೇಕಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಸಲ್ಲಿಸಿ ಮತ್ತು ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ.

LINK: Apply Now 

.

WhatsApp Float Button

Leave a Comment

error: Content is protected !!