New Ration Card Applying Start For E Shrama Card Holders: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಕೊನೆಯ ದಿನಾಂಕ ಏನು? ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಅನ್ನು ಪಡೆಯುವುದು ಕಡಿಮೆ ಆದಾಯದ ಕುಟುಂಬಗಳಿಗೆ ಆಹಾರ ಸೌಲಭ್ಯಗಳ ಭಾಗಗಳು ತೆರೆದಂತಾಗಿದೆ. ಈಗ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಯೋಗದೊಂದಿಗೆ ಹೊಸ ಅರ್ಜಿ ಪ್ರಕ್ರಿಯೆಯು ಸರಳಗೊಂಡಿದ್ದು. ಈಗ ಈ ಶ್ರಮ ಕಾರ್ಡನ್ನು ಹೊಂದಿರುವ ಶ್ರಮಿಕರಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಈಗ ಆಹಾರ ಇಲಾಖೆಯ ಮೂಲಕ ನಡೆಯುವಂತಹ ಈ ಒಂದು ಪ್ರಕ್ರಿಯೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳ ಕುಟುಂಬಗಳಿಗೆ ಧಾನ್ಯ, ತೈಲ ಇನ್ನೂ ಹಲವಾರು ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ನೀಡುವಂತಹ ಅವಕಾಶವನ್ನು ನೀಡಿದೆ.

ಅದೇ ರೀತಿಯಾಗಿ ಈಗ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಈಗ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನೀವು ಕೂಡ ಈ ಒಂದು ರೇಷನ್ ಕಾರ್ಡ್ ನ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಕೂಡಲೇ ಈ ಒಂದು ಲೇಖನದಲ್ಲಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಯ ಮೂಲಕ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ಪಡಿತರ ಚೀಟಿಯ ಮಹತ್ವವೇನು?
ಈ ಒಂದು ಪಡಿತರ ಚೀಟಿಯ ಮುಖ್ಯ ಉದ್ದೇಶವು ಏನೆಂದರೆ ಹಾಗೆ ಈಗ ಬಡ ಕುಟುಂಬದಲ್ಲಿ ಇರುವಂತ ಪ್ರತಿಯೊಬ್ಬ ಕುಟುಂಬಗಳಿಗೂ ಕೂಡ ಈ ಒಂದು ರೇಷನ್ ಕಾರ್ಡ್ ನೀಡಲಾಗುತ್ತದೆ. ಏಕೆಂದರೆ ಈ ಒಂದು ರೇಷನ್ ಕಾರ್ಡ್ ನ ಮೂಲಕ ಅವರು ಪ್ರತಿ ತಿಂಗಳು ಪಡಿತರವನ್ನು ಅಂದರೆ ಅಕ್ಕಿಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ದಾನ್ಯ ತೈಲ ಇನ್ನು ಹಲವಾರು ಅಗತ್ಯ ಉತ್ಪನ್ನಗಳನ್ನು ಪಡೆಯಲು ಕೂಡ ಈ ಒಂದು ರೇಷನ್ ಕಾರ್ಡ್ ಅಗತ್ಯ ದಾಖಲೆ ಆಗಿದೆ.
ಅಷ್ಟೇ ಅಲ್ಲದೆ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಲ್ಲಿ ಆದಷ್ಟು ಎಲ್ಲಾ ಯೋಜನೆಗಳಿಗೂ ಕೂಡ ಈ ಒಂದು ಪಡಿತರ ಚೀಟಿ ಅಗತ್ಯ ದಾಖಲೆ ಆಗಿದೆ. ಅದೇ ರೀತಿ ಇನ್ನೂ ಬೇರೆ ಬೇರೆ ಯೋಜನೆಗಳಿಗೂ ಕೂಡ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಅಲ್ಲಿಯೂ ಕೂಡ ಈ ಒಂದು ರೇಷನ್ ಕಾರ್ಡ್ ಅಗತ್ಯ ದಾಖಲೆ ಆಗಿರುತ್ತದೆ. ಈಗ ನೀವು ಕೂಡ ಹೊಸ ರೇಷನ್ ಕಾರ್ಡ್ ಪಡೆಯಬೇಕೆಂದರೆ ಈ ಒಂದು ಕೆಳಗಿನ ಅರ್ಹತೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಲೇಬೇಕು.
ಅರ್ಹತೆಗಳು ಏನು?
- ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಶ್ರಮ ಕಾರ್ಡನ್ನು ಹೊಂದಿರಬೇಕು.
- ಆನಂತರ ಅವರು 5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರಬೇಕು ಆಗ ಮಾತ್ರ ಅವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಅವರ ಆದಾಯದ ಕುಟುಂಬದ ವಾರ್ಷಿಕ ಆದಾಯದ ಮಿತಿ 1.20 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಆನಂತರ ಅವರ ಐಷಾರಾಮಿ ಮನೆಯನ್ನು ಹೊಂದಿರಬಾರದು.
- ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸುವಂತಹ ಕುಟುಂಬದಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಕೂಡ ಸರಕಾರಿ ನೌಕರಿಯನ್ನು ಹೊಂದಿರಬಾರದು.
- ಆನಂತರ ಕುಟುಂಬದಲ್ಲಿ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಾ ಇರಬಾರದು.
ಬೇಕಾಗುವ ದಾಖಲೆಗಳು ಏನು?
- ಈ ಶ್ರಮ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೇವ ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ, ಇಲ್ಲವೇ ನಿಮ್ಮ ಹತ್ತಿರ ಇರುವಂತಹ ಆಹಾರ ಇಲಾಖೆಗೆ ಭೇಟಿಯನ್ನು ನೀಡಿ ಅಲ್ಲಿಯೂ ಕೂಡ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.