Kalika Bhagya Scheme: ಕಾರ್ಮಿಕರ ಮಕ್ಕಳಿಗೆ 50,000 ವಿದ್ಯಾರ್ಥಿವೇತನ! ಈಗಲೇ ಅರ್ಜಿ ಸಲ್ಲಿಸಿ.

 Kalika Bhagya Scheme: ಕಾರ್ಮಿಕರ ಮಕ್ಕಳಿಗೆ 50,000 ವಿದ್ಯಾರ್ಥಿವೇತನ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಿಮಗೆ ತಿಳಿದಿರುವಂತೆ ಶಿಕ್ಷಣ ಎನ್ನುವುದು ಕೇವಲ ಪಠ್ಯಪುಸ್ತಕ, ಪರೀಕ್ಷೆ ಅಥವಾ ಅಂಕಪಟ್ಟಿಗಳಲ್ಲಿ ಸೀಮಿತವಾಗಿರುವುದಲ್ಲ. ಅದು ಒಂದು ಕುಟುಂಬದ ಭವಿಷ್ಯವನ್ನು ಬದಲಾಯಿಸುವ ಶಕ್ತಿ. ಆದರೆ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಅನೇಕ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣವೇ ದೊಡ್ಡ ಆರ್ಥಿಕ ಹೊರೆ ಆಗಿದೆ.

Kalika Bhagya Scheme

ಇಂತಹ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ಸ್ಪಷ್ಟ ಉದ್ದೇಶದಿಂದ ಕರ್ನಾಟಕ ಸರ್ಕಾರ ಈಗ  ಕಲಿಕಾ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. 2025–26ನೇ ಶೈಕ್ಷಣಿಕ ವರ್ಷಕ್ಕೆ ಈ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ವರ್ಷಕ್ಕೆ ₹50,000 ವರೆಗೆ ಶಿಕ್ಷಣ ಸಹಾಯಧನ ನೀಡಲಾಗುತ್ತಿದೆ.

ಕಲಿಕಾ ಭಾಗ್ಯ ಯೋಜನೆ ಮಾಹಿತಿ 

ಈಗ ಕಲಿಕಾ ಭಾಗ್ಯ ಯೋಜನೆ ಎನ್ನುವುದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಜಾರಿಗೊಳಿಸಲಾದ ವಿಶೇಷ ಶೈಕ್ಷಣಿಕ ಸಹಾಯಧನ ಯೋಜನೆ. ಆರ್ಥಿಕವಾಗಿ ಹಿಂದುಳಿದ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ನಿರಂತರವಾಗಿ ಶಿಕ್ಷಣ ಮುಂದುವರಿಸಲು ಹಣಕಾಸಿನ ನೆರವು ನೀಡುವುದೇ ಈ ಯೋಜನೆಯ ಮುಖ್ಯ ಗುರಿ.

ಈ ಯೋಜನೆಯಡಿ ನೀಡಲಾಗುವ ಸಹಾಯಧನವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದರ ಮೂಲಕ ಮಧ್ಯವರ್ತಿಗಳ ಸಮಸ್ಯೆ ತಪ್ಪಿಸಿ, ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿದೆ. ಶಿಕ್ಷಣ ಮಧ್ಯದಲ್ಲೇ ಕೈಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ಆಶಯವಾಗಿದೆ.

ದೊರೆಯುವ ಸಹಾಯಧನ ಎಷ್ಟು?

ಈಗ ಕಲಿಕಾ ಭಾಗ್ಯ ಯೋಜನೆಯ ದೊಡ್ಡ ವಿಶೇಷತೆ ಎಂದರೆ, ಇದು ಕೇವಲ ಉನ್ನತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದ್ಯಾರ್ಥಿಯ ಶಿಕ್ಷಣದ ಪ್ರಾರಂಭ ಹಂತದಿಂದಲೇ ನೆರವು ಸಿಗುತ್ತದೆ.

  • 1ರಿಂದ 3ನೇ ತರಗತಿ – ₹2,000
  • 4ರಿಂದ 7ನೇ ತರಗತಿ – ₹4,000
  • 8ನೇ ತರಗತಿ – ₹5,000
  • 9, 10 ಮತ್ತು PUC – ₹6,000 ರಿಂದ ₹8,000
  • ಪದವಿ (Degree) – ₹10,000
  • ಸ್ನಾತಕೋತ್ತರ (PG) – ₹20,000
  • ಇಂಜಿನಿಯರಿಂಗ್ (BE/BTech) – ₹25,000 (ಮೊದಲ ವರ್ಷ)
  • ವೈದ್ಯಕೀಯ (MBBS) – ₹30,000 ರಿಂದ ₹50,000 (ಮೊದಲ ವರ್ಷ)

ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಯೋಜನೆಯ ಉದ್ದೇಶ ಏನು?

ಕಲಿಕಾ ಭಾಗ್ಯ ಯೋಜನೆ ಕೇವಲ ಹಣಕಾಸಿನ ನೆರವಲ್ಲ; ಅದು ಸಾಮಾಜಿಕ ಬದಲಾವಣೆಯ ಸಾಧನವಾಗಿದೆ.

  • ಕಾರ್ಮಿಕರ ಮಕ್ಕಳಿಗೆ ಸಮಾನ ಶಿಕ್ಷಣಾವಕಾಶ ಕಲ್ಪಿಸುವುದು.
  • ಅದೇ ರೀತಿಯಾಗಿ ಆರ್ಥಿಕ ಕೊರತೆಯಿಂದ ಶಿಕ್ಷಣ ಕೈಬಿಡುವ ಪ್ರಮಾಣ ಕಡಿಮೆ ಮಾಡುವುದು.
  • ಹಾಗೆಯೆ ವೃತ್ತಿಪರ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು.
  • ಶಿಕ್ಷಣದ ಮೂಲಕ ಕುಟುಂಬಗಳ ಆರ್ಥಿಕ ಸ್ಥಿರತೆ ಸಾಧಿಸಲು ನೆರವು ನೀಡುವುದು.

ಅರ್ಹತೆಗಳು ಏನು?

ಈ ಯೋಜನೆಯ ಲಾಭ ಪಡೆಯಲು ಕೆಲವು ಪ್ರಮುಖ ಅರ್ಹತಾ ಮಾನದಂಡಗಳಿವೆ:

  • ಈಗ ಪೋಷಕರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಲೇಬರ್ ಕಾರ್ಡ್ ಹೊಂದಿರಬೇಕು.
  • ಹಾಗೆ ಕುಟುಂಬದ ವಾರ್ಷಿಕ ಆದಾಯ ₹1,00,000 ಕ್ಕಿಂತ ಕಡಿಮೆ ಇರಬೇಕು.
  • ವಿದ್ಯಾರ್ಥಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರಬೇಕು.
  • ಹಿಂದಿನ ತರಗತಿಯಲ್ಲಿ ಕನಿಷ್ಠ 60–75% ಅಂಕ ಪಡೆದಿದ್ದರೆ ಆದ್ಯತೆ.

ಬೇಕಾಗುವ ದಾಖಲೆಗಳು

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಲೇಬರ್ ಕಾರ್ಡ್
  • ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
  • ಆದಾಯ ಪ್ರಮಾಣ ಪತ್ರ
  • ಶಾಲೆ/ಕಾಲೇಜಿನ ಬೋನಫೈಡ್ ಪ್ರಮಾಣ ಪತ್ರ
  • SATS ID / Student ID
  • ಹಿಂದಿನ ವರ್ಷದ ಅಂಕಪಟ್ಟಿ

ಅರ್ಜಿ ಸಲ್ಲಿಸುವುದು ಹೇಗೆ?

  • ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • “Educational Assistance / Kalika Bhagya” ಆಯ್ಕೆಮಾಡಿಕೊಳ್ಳಿ.
  • ನಂತರ ಲೇಬರ್ ಕಾರ್ಡ್ ಸಂಖ್ಯೆ ಮೂಲಕ ಲಾಗಿನ್ ಮಾಡಿಕೊಳ್ಳಿ.
  • ವಿದ್ಯಾರ್ಥಿಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಸಲ್ಲಿಸಿ ಮತ್ತು ಅಕ್ನಾಲೆಡ್ಜ್‌ಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಿ.

LINK : Apply Now 

WhatsApp Float Button

Leave a Comment

error: Content is protected !!