Indira Kit Distribuation Update News: ಅನ್ನಭಾಗ್ಯ ಯೋಜನೆಯಡಿಯಲ್ಲಿ ಮತ್ತೊಂದು ಹೊಸ ಗಿಫ್ಟ್! ಈ ದಿನದಿಂದ ಇಂದಿರ ಕಿಟ್ ವಿತರಣೆ!
ಈಗ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಬಿಡುಗಡೆಯಾಗಿದ್ದು. ಈಗ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಈಗ ಇಂದಿರಾ ಕೀಟ ಅನ್ನು ಫೆಬ್ರುವರಿ 4 ರಿಂದ ಅಗತ್ಯ ವಸ್ತುಗಳ ಜೊತೆಗೆ ಈಗ ಉಚಿತವಾಗಿ ನೀಡಲಾಗುತ್ತ ಇದೆ. ಹಾಗೆಯೇ ನಮ್ಮ ಕರ್ನಾಟಕದ ಲಕ್ಷಾಂತರ ಬಡ ಕುಟುಂಬಗಳಿಗೆ ಇದೀಗ ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು.

ಈಗ ನಮ್ಮ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು. ಈಗ 2026ರ ಫೆಬ್ರವರಿ ಇಂದ ಪ್ರತಿ ತಿಂಗಳು ಕೂಡ ರೇಷನ್ ಕಾರ್ಡ್ ಇರುವಂತಹ ಪ್ರತಿಯೊಂದು ಎಲ್ಲಾ ಕುಟುಂಬಗಳಿಗೂ ಕೂಡ ಈ ಒಂದು ಇಂದಿರಾಕಟನ್ನು ಉಚಿತವಾಗಿ ವಿತರಿಸಲು ತೀರ್ಮಾನವನ್ನು ತೆಗೆದುಕೊಂಡಿದೆ.
ಈಗ ಈ ಒಂದು ಇಂದಿರಾ ಕಿಟ್ಟಿನಲ್ಲಿ ಈಗ 5 ಕೆಜಿ ಅಕ್ಕಿಯ ಬದಲಿಗೆ ಇನ್ನೂ ಮುಂದೆ ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಉಪ್ಪು ಸೇರಿದಂತೆ ನಾಲ್ಕು ಮುಖ್ಯ ಅಗತ್ಯ ವಸ್ತುಗಳನ್ನು ಈಗ ವಿತರಣೆ ಮಾಡಲಾಗುತ್ತದೆ. ಅದೇ ರೀತಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರ ನೀಡಿರುವ ಮಾಹಿತಿಯ ಪ್ರಕಾರ ಇದು ಕೇವಲ ಹೊಟ್ಟೆ ತುಂಬಿಸುವಂತಹ ಯೋಜನೆ ಎಲ್ಲಾ ಪೋಷಕಾಂಶದ ಸಮತೋಲನದೊಂದಿಗೆ ಆರೋಗ್ಯವನ್ನು ಕಾಪಾಡುವುದು ನಮ್ಮ ಗುರಿ ಎಂದು ಮಾಹಿತಿಯನ್ನು ನೀಡಿದ್ದಾರೆ.
ಈಗ ಈ ಒಂದು ಯೋಜನೆಯಿಂದ ಈಗ ನಮ್ಮ ರಾಜ್ಯದ 1.3 ಕೋಟಿಗೂ ಹೆಚ್ಚು ರೇಷನ್ ಕಾರ್ಡ್ ಫಲಾನುಭವಿಗಳಿಗೆ ನೇರವಾಗಿ ಈ ಒಂದು ಇಂದಿರಾ ಕಿಟ್ ಅನ್ನು ವಿತರಣೆ ಮಾಡಲಾಗುತ್ತದೆ. ಈಗ ನೀವು ಕೂಡ ಈ ಒಂದು ಇಂದಿರಾ ಕಿಟ್ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾ ಹಾಗಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಮಾಹಿತಿ
ಈಗ ಈ ಒಂದು ಕಿಟ್ ಅನ್ನು ಈಗ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಯನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಕುಟುಂಬದ ಸದಸ್ಯರ ಸಂಖ್ಯೆ ಆಧಾರದ ಮೇಲೆ ಈಗ ತೊಗರಿ ಬೆಳೆಯನ್ನು ವಿತರಣೆ ಮಾಡಲಾಗುತ್ತದೆ. ಪ್ರತಿಯೊಂದು ವಸ್ತುಗಳಿಗೂ ಕೂಡ ಎಲ್ಲರಿಗೂ ಸಮಾನವಾಗಿ ನೀಡಲಾಗುತ್ತದೆ.
ಅಂದರೆ ಈಗ ಈ ಒಂದು ತೊಗರಿ ಬೆಳೆಯನ್ನು 1 ರಿಂದ 3 ಸದಸ್ಯರು ಇರುವಂತಹ ಸದಸ್ಯರಿಗೆ 250 ಗ್ರಾಂ ತೊಗರಿ ಬೆಳೆ ನೀಡಲಾಗುತ್ತದೆ. ನಂತರ ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಸಕ್ಕರೆ, ಒಂದು ಕೆಜಿ ಉಪ್ಪನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಸರ್ಕಾರ ಈ ಒಂದು ಕಿಟ್ ಜೊತೆಗೆ ಐದು ಕೆಜಿ ಅಕ್ಕಿಯನ್ನು ಮುಂದುವರಿಸುವ ಸಾಧ್ಯತೆ ಇದೆ. ಕೆಲವೊಂದು ಇಲಾಖೆಗಳ ಮೂಲಗಳಿಂದ ತಿಳಿದುಬಂದಿದೆ. ಆದರೆ ಪ್ರಸ್ತುತ ಘೋಷಣೆಯಲ್ಲಿ ಈ ಒಂದು ಕಿಟ್ ಬದಲಾಗಿ ಅಕ್ಕಿ ಇಲ್ಲ ಎಂದು ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ.
ಅರ್ಹತೆ ಮತ್ತು ಪ್ರಕ್ರಿಯೆ ಏನು?
ಈಗ ನಮ್ಮ ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಅನ್ನು ಹೊಂದಿರುವಂತಹ ಎಲ್ಲಾ ಕುಟುಂಬಗಳಿಗೂ ಈ ಒಂದು ಕಿಟ್ ವಿತರಣೆ ಮಾಡಲಾಗುತ್ತದೆ. ಈ ಒಂದು ಈ ಕಿಟನ್ನು ಪಡೆಯಲು ನೀವು ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಹಾಗೂ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದ್ದರೆ ಸಾಕು. ನೀವು ಕೂಡ ಈ ಒಂದು ಕಿಟ್ ಅನ್ನು ಪಡೆದುಕೊಳ್ಳಬಹುದು.
ಹಾಗೆ ನೀವು ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ekyc ಪೂರ್ಣಗೊಳಿಸಿರಬೇಕು. ಆಗ ಮಾತ್ರ ನೀವು ಕೂಡ ಈ ಒಂದು ಇಂದಿರಾ ಕಿಟ್ ಪಡೆಯಲು ಅರ್ಹತೆಯನ್ನು ಪಡೆಯುತ್ತೀರಿ.
ವಿತರಣೆ ಹೇಗೆ?
ಈ ಒಂದು ಕಿಟ್ ಅನ್ನು ಈಗ ಪ್ರತಿ ತಿಂಗಳು 1 ರಿಂದ 10ರವರೆಗೆ ನ್ಯಾಯಬೆಲೆ ಅಂಗಡಿಗಳ ಕಿಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಆನಂತರ ನೀವು ಬಯೋಮೆಟ್ರಿಕ್ ಮೂಲಕ ಈ ಒಂದು ಕಿಟ್ಟನ್ನು ಪಡೆದುಕೊಳ್ಳಬೇಕು ಮತ್ತು ಜಿಲ್ಲಾಮಟ್ಟದಲ್ಲಿ ವಿಶೇಷ ತಂಡಗಳು ಮೇಲ್ವಿಚಾರಣೆಯನ್ನು ನಡೆಸುತ್ತವೆ.
ಸರ್ಕಾರವು ನೀಡುವಂತ ಮಾಹಿತಿ ಪ್ರಕಾರ ಈಗ ಫೆಬ್ರುವರಿ ತಿಂಗಳಿನಿಂದ ಈ ಒಂದು ಇಂದಿನ ಕಿಟ್ ಅನ್ನು ವಿತರಣೆ ಮಾಡಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿಯನ್ನು ನೀಡಿದ್ದು. ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಇಂದಿರಾ ಕಿಟ್ ಅನ್ನು ಇನ್ನು ಮುಂದೆ ಪಡೆದುಕೊಳ್ಳಬಹುದು.