Gruhalakshmi Yojane Update: ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! ಇಲ್ಲಿದೆ ನೋಡಿ ಸಚಿವರು ನೀಡಿರುವ ಮಾಹಿತಿ.

Gruhalakshmi Yojane Update: ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! ಇಲ್ಲಿದೆ ನೋಡಿ ಸಚಿವರು ನೀಡಿರುವ ಮಾಹಿತಿ.

ಈಗ ಕರ್ನಾಟಕದ ಅತ್ಯಂತ ಜನಪ್ರಿಯ ಮಹಿಳಾ ಕಲ್ಯಾಣ ಯೋಜನೆಯಲ್ಲಿ ಒಂದಾದಂತಹ ಯೋಜನೆ ಅಂದರೆ ಗೃಹಲಕ್ಷ್ಮಿ ಯೋಜನೆ. ಈ ಒಂದು ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈಗ ಈ ಒಂದು ಸಾಮಾಜಿಕ ಜಾಲತನದಲ್ಲಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಈಗ 99% ಫಲಾನುಭವಿಗಳಿಗೆ ಪ್ರತಿ ತಿಂಗಳು ನೆರವಾಗಿ ಅವರಿಗೆ ಹಣವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಈ ಒಂದು ಯೋಜನೆ ಮೂಲಕ ಪ್ರತಿಯೊಬ್ಬ ಮಹಿಳೆಯರಿಗೆ ಅಂದರೆ ಆರಂಭ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಪ್ರತಿ ತಿಂಗಳು 2000 ಹಣವನ್ನು ಸರ್ಕಾರವು ಜಮಾ ಮಾಡುತ್ತಾ ಬಂದಿದೆ. ಆದರೆ ಈಗ ಕಳೆದ ಕೆಲವು ತಿಂಗಳಿನಲ್ಲಿ ಒಂದು ಪೆಂಡಿಂಗ್ ಇರುವಂತಹ ಹಣಗಳು ಇನ್ನೂ ಜಮಾ ಆಗಿಲ್ಲ. ಅದರ ಬಗ್ಗೆ ಈಗ ಸಚಿವರು ನೀಡುವ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಸಿಎಂ ಸಿದ್ದರಾಮಯ್ಯನವರು ನೀಡಿರುವ ಮಾಹಿತಿ ಏನು?

ಈಗ ನಮ್ಮ ಸರ್ಕಾರದ ಗುರಿ ಏನೆಂದರೆ ಪ್ರತಿ ಮಹಿಳೆಯರಿಗೆ  ಆರ್ಥಿಕವಾಗಿ ಸ್ವತಂತ್ರಗೊಳಿಸುವುದು ಮುಖ್ಯ ಗುರಿಯಾಗಿದೆ. ಅದೇ ರೀತಿಯಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ 99% ಮಹಿಳೆಯರು ತಮ್ಮ ಹಣದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿದ್ದಾರೆ. ಈ ಒಂದು ಮನವಿ ಕುಟುಂಬದ ಒಟ್ಟು ಆದಾಯದಲ್ಲಿ ಸುಮಾರು 17% ಹೆಚ್ಚಳವನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಹಣದಿಂದ ಈಗ ಮಹಿಳೆಯರು ಆಹಾರ, ಆರೋಗ್ಯ ಮತ್ತು ಮಕ್ಕಳ ಶಿಕ್ಷಣ ಮತ್ತು ಇನ್ನು ಮನೆಯ ಖರ್ಚುಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಸ್ಥಿತಿ ಏನು?

ಈಗ ಒಟ್ಟಾರೆಯಾಗಿ ಈ ಒಂದು ಯೋಜನೆ ಅಡಿಯಲ್ಲಿ 1.25 ಕೋಟಿಗಿಂತ ಹೆಚ್ಚು ಮಹಿಳೆಯರು ನೋಂದಾವಣೆಯನ್ನು ಮಾಡಿಕೊಂಡಿದ್ದು. ಇತ್ತೀಚಿಗೆ ಈಗ ಅಕ್ಟೋಬರ್ 20 2025 ರಂದು 22ನೇ ಕಂತಿನ ಹಣವನ್ನು ಸರ್ಕಾರವು ಈಗ ಪ್ರತಿಯೊಬ್ಬರ ಖಾತೆಗಳಿಗೆ ಹಣವನ್ನು ಜಮಾ ಮಾಡಿದೆ.

ಅಷ್ಟೇ ಅಲ್ಲದೆ ಈಗ ಈ ಒಂದು ಫಲಾನುಭವಿಗಳನ್ನು ಈಗ ಅಕ್ಕ ಸಹಕಾರಿ ಸೊಸೈಟಿಗೆ ಸೇರ್ಪಡೆ ಮಾಡಿಕೊಂಡು ಅವರಿಗೆ ದಾಖಲೆಗಳು ಇಲ್ಲದೆ ಈಗ ಮೂರು ಲಕ್ಷದವರೆಗೆ ಸಾಲವನ್ನು ನೀಡುವಂತ ವ್ಯವಸ್ಥೆಯನ್ನು ಈಗ ಪ್ರಾರಂಭ ಮಾಡಲಾಗುತ್ತದೆ ಎಂದು ಇಗ ಮಾಹಿತಿಯನ್ನು ನೀಡಿದ್ದಾರೆ.

ಹಣ ಬರದೆ ಇರಲು ಕಾರಣಗಳು ಏನು?

  • ಈಗ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರಬಹುದು, ಇಲ್ಲವೇ NPCI ಮ್ಯಾಪಿಂಗ್ ಆಗದೆ ಹೋದರೆ ನಿಮಗೆ ಈ ಒಂದು ಯೋಜನೆ ಹಣವು ಬಂದು ತಲುಪುವುದಿಲ್ಲ.
  • ಅದೇ ರೀತಿಯಾಗಿ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು ಮಾಡಿಸದೆ ಇದ್ದರೂ ಕೂಡ ನಿಮಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯನ್ನು ಬಂದು ತಲುಪುವುದಿಲ್ಲ.
  • ಆನಂತರ ನಿಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬ ಸದಸ್ಯರು ಕೂಡ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಹಾಗೂ ಜಿಎಸ್​ಟಿ ಫೀಲಿಂಗ್ ಮಾಡುತ್ತಿದ್ದರೆ ಅವರನ್ನು ಈ ಒಂದು ಯೋಜನೆಯಿಂದ ಹೊರಗೆ ಹಾಕಲಾಗುತ್ತದೆ..
  • ಅದೇ ರೀತಿಯಾಗಿ ಈಗ ಪಂಚಾಯತ್ ಮಟ್ಟದಲ್ಲಿ ತಾಂತ್ರಿಕ ವಿಳಂಬದಿಂದಾಗಿ ಈ ಒಂದು ಹಣ ವರ್ಗಾವಣೆಯಲ್ಲಿ ಈಗ ತಡ ಆಗುವ ಸಾಧ್ಯತೆ ಇದೆ.

ಸ್ಟೇಟಸ್ ಚೆಕ್ ಮಾಡುವುದು ಹೇಗೆ?

  • ಈಗ ನೀವು ಈ ಒಣದು ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಮೊದಲು ಪ್ಲೇ ಸ್ಟೋರಿಗೆ ಹೋಗಿ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಓಟಿಪಿ ಮೂಲಕ ಲಾಗಿನ್ ಮಾಡಿಕೊಳ್ಳಿ.
  • ತದನಂತರ ನೀವು ಅದರಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿಕೊಂಡು ಎಲ್ಲಾ ಕಂತಿನಲ್ಲಿ ವಿವರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಸಚಿವರು ನೀಡುವ ಮಾಹಿತಿ ಏನು?

ಈಗ ಸಚಿವರು ಮಾಹಿತಿ ಪ್ರಕಾರ ಈಗ ಯಾರನ್ನು ಕೂಡ ಈ ಒಂದು ಪಟ್ಟಿಯನ್ನು ತೆಗೆದು ಹಾಕಿಲ್ಲ. ಕೆಲವು ತಾಂತ್ರಿಕ ಅಡಚನೆಗಳಿಂದಾಗಿ ಈ ಒಂದು ಹಣವು ಜಮಾ ಆಗುವುದು ತಡವಾಗಿದೆ. ಇನ್ನು ಬಾಕಿ ಉಳಿದಿರುವಂತ ಹಣಗಳನ್ನು ಇನ್ನೂ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹಾಗೆಯೇ ಅಕ್ಕ ಸೊಸೈಟಿ ಮೂಲಕ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ’.

ಅದೇ ರೀತಿಯಾಗಿ ಕೆಲವೊಂದಷ್ಟು ತಾಂತ್ರಿಕ ಸಮಸ್ಯೆಗಳಿಂದಾಗಿ ಈಗ ಕೆಲವರಿಗೆ ಇನ್ನೂ ಈ ಒಂದು ಯೋಜನೆ ಹಣವನ್ನು ತಲುಪಿಲ್ಲ. ಸರ್ಕಾರ ಈಗಾಗಲೇ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು. ಇನ್ನು ಬಾಕಿ ಉಳಿದಿರುವಂತ ಪ್ರತಿಯೊಂದು ಕಂತಿನ ಹಣವನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

 

WhatsApp Float Button

Leave a Comment

error: Content is protected !!