Gruhalakshmi Yojane 25 Installment Update: ಗೃಹಲಕ್ಷ್ಮಿ ಯೋಜನ 25ನೇ ಕಂತಿನ ಹಣ ಜಮಾ ಆಗುವ ದಿನಾಂಕ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Yojane 25 Installment Update: ಗೃಹಲಕ್ಷ್ಮಿ ಯೋಜನ 25ನೇ ಕಂತಿನ ಹಣ ಜಮಾ ಆಗುವ ದಿನಾಂಕ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಈಗ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವಂತ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ರೇಷನ್ ಕಾರ್ಡ್ ಅನ್ನು ಹೊಂದಿರುವಂತಹ ಪ್ರತಿಯೊಂದು ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2000 ಹಣದ ನೆರವು ನೀಡುವ ಯೋಜನೆ ಇದಾಗಿತ್ತು.

Gruhalakshmi Yojane 25 Installment Update

ಈಗ ಈ ಒಂದು ಯೋಜನೆ 2023 ರಲ್ಲಿ ಆಗಸ್ಟ್ ನಲ್ಲಿ ಪ್ರಾರಂಭವಾಗಿ ಇದುವರೆಗೂ ಕೂಡ 24 ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದು. ಈಗ 25ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಎಲ್ಲಾ ಮಹಿಳೆಯರು ಕಾದು ಕುಳಿತಿದ್ದಾರೆ. ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಹಾಗಿದ್ದರೆ 25ನೇ ಕಂತಿನ ಹಣವನ್ನು ಯಾವಾಗ ಜಮಾ ಆಗುತ್ತದೆ ಹಾಗೂ ಯಾವೆಲ್ಲ ಖಾತೆಗಳಿಗೆ ಜಮಾ ಆಗುತ್ತದೆ ಹಾಗೂ ಹಣ ಜಮಾ ಆಗದಿದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಣ ಜಮಾ ಪ್ರಕ್ರಿಯ ಮಾಹಿತಿ

ಈಗ ನಿಮಗೆ ತಿಳಿದಿರುವಂತೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಕಂತುಗಳಲ್ಲಿ ಪ್ರತಿ ತಿಂಗಳು ಆರಂಭದಲ್ಲಿ ಅಥವಾ ಮಧ್ಯಭಾಗದಲ್ಲಿ ಹಂತ ಹಂತವಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಾ ಬಂದಿತ್ತು. ಅದೇ ರೀತಿಯಾಗಿ ಈ ಬಾರಿಯೂ ಕೂಡ 25ನೇ ಕಂತಿನ ಹಣವನ್ನು ಜನವರಿ ತಿಂಗಳ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಈ ಒಂದು ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಈಗ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಈಗ ಈ ಒಂದು ಹಣವು ಯಾವುದೇ ಕಾರಣಕ್ಕೂ ಒಂದೇ ದಿನಕ್ಕೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾ ಆಗುವುದಿಲ್ಲ ಬದಲಿಗೆ ಜಿಲ್ಲೆಗಳು ಬ್ಯಾಂಕ್ ವ್ಯವಸ್ಥೆ ಮತ್ತು ತಾಂತ್ರಿಕ ಕಾರಣಗಳಿಂದ ಎರಡ ರಿಂದ ಏಳು ದಿನಗಳ ಕಾಲ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಹಂತ ಹಂತವಾಗಿ ಜಮಾ ಆಗುತ್ತದೆ.

ಅದೇ ರೀತಿಯಾಗಿ ಈಗಾಗಲೇ ಕೆಲವೊಂದು ಮಾಹಿತಿಗಳ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ 24ನೇ ಕಂತಿನ ಹಣವು ಕೂಡ ಬಿಡುಗಡೆಯಾಗಿದ್ದು. 25ನೇ ಕಂತಿನ ಹಣ ಜನವರಿ ಮಧ್ಯದಲ್ಲಿ ಈಗ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಅದೇ ರೀತಿಯಾಗಿ 21 ಮತ್ತು 24ನೇ ಕಂತಿನ ಹಣಗಳು ಪೆಂಡಿಂಗ್ ಇದ್ದರೆ ಅವುಗಳು ಕೂಡ ಈಗ ಈ ಒಂದು ಜನವರಿ ಅಂತ್ಯದೊಳಗಾಗಿ ಪ್ರತಿಯೊಬ್ಬ ಮಹಿಳಾ ಖಾತೆಗಳಿಗೆ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಮೊದಲನೇ ಹಂತದಲ್ಲಿ ಈ ಒಂದು ಹಣವು  ಬಿಡುಗಡೆ ಆದಾಗ 18 ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಹಣವು ಜಮಾ ಆಗುವ ಸಾಧ್ಯತೆ ಇದೆ. ಅಂದರೆ ಈಗ ಬೆಳಗಾವಿ, ಚಿಕ್ಕಬಳ್ಳಾಪುರ, ಬೀದರ್, ಮೈಸೂರು, ಕಲ್ಬುರ್ಗಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ವಿಜಯನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಂತಹ ಈ ಒಂದು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಬಿಡುಗಡೆ ಆಗುತ್ತದೆ.

ಹಣ ಜಮಾ ಆಗದಿದ್ದರೆ ಏನು ಮಾಡಬೇಕು

ನಿಮ್ಮ ಖಾತೆಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ  ಆಗದೆ ಇದ್ದರೆ ಈಗ ನೀವು ನಿಮ್ಮ ಖಾತೆಗಳಿಗೆ NPCI ಮ್ಯಾಪಿಂಗ್ ಆಗಿದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಅದೇ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ ಇಲ್ಲವೇ ಎಂಬುದನ್ನು ಕೂಡ ಚೆಕ್ ಮಾಡಿಕೊಳ್ಳಿ. ಹಾಗೆ ನಿಮ್ಮ ಸದಸ್ಯರ ರೇಷನ್ ಕಾರ್ಡ್ ನಲ್ಲಿ ಪ್ರತಿಯೊಬ್ಬ ಸದಸ್ಯರ EKYC ಆಗಿದೆ ಇಲ್ಲವೇ ಎಂಬುದನ್ನು ಕೂಡ ಒಂದು ಬಾರಿ ಚೆಕ್ ಮಾಡಿಕೊಳ್ಳಿ.

ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ. ಈಗ ನೀವು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ DBT ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಆನಂತರ ನಿಮ್ಮ ಖಾತೆಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.

WhatsApp Float Button

Leave a Comment

error: Content is protected !!