Gruhalakshmi Yojane 24 Installment Credit: ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸಿಹಿ ಸುದ್ದಿ? ಈ ತಿಂಗಳ 24 ಕಂತಿನ ಹಣ ಖಾತೆಗೆ ಜಮಾ!
ಈಗ ನಮ್ಮ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆದಂತಹ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ಅರ್ಹ ಮಹಿಳೆಯರಿಗೆ ಹೊಸ ವರ್ಷಕ್ಕೂ ಮುನ್ನ ಈಗ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಈಗ ಕಳೆದ ಕೆಲವು ತಿಂಗಳುಗಳಿಂದ ಹಣ ಜಮೆಯಲ್ಲಿ ಆಗಿದ್ದ ವಿಳಂಬದಿಂದ ಈಗ ಅನೇಕ ಮಹಿಳೆಯರು ಆತಂಕದಲ್ಲಿ ಇದ್ದರು. ಅಷ್ಟೇ ಅಲ್ಲದೆ ಈಗ ಈ ಒಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡಿರುವ ಸ್ಪಷ್ಟ ಘೋಷಣೆ ಈಗ ಖುಷಿಯನ್ನು ನೀಡಿದೆ.

ಅದೇ ರೀತಿಯಾಗಿ ಡಿಸೆಂಬರ್ 22 2025 ರಂದು ಬೆಳಗಾವಿಯಲ್ಲಿ ನಡೆದಂತಹ ಪೋಲಿಯೋ ಅಭಿಯಾನ ಕಾರ್ಯಕ್ರಮದ ವೇಳೆಗೆ ಮಾಧ್ಯಮಗಳೊಂದಿಗೆ ಮಾತನಾಡಿದಂತಹ ಸಚಿವರು ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಈಗ ಹಣಕಾಸು ಇಲಾಖೆ ಅಧಿಕೃತವಾಗಿ ಒಪ್ಪಿಗೆಯನ್ನು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
24ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದಿಂದ ಬಿಡುಗಡೆ!
ಈಗ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಹೇಳಿರುವ ಮಾಹಿತಿ ಪ್ರಕಾರ ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ 2000 ಹಣ ಈಗ ನಿನ್ನೆಯಿಂದ ಆರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ DBT ಮೂಲಕ ಹಣವನ್ನು ಜಮಾ ಮಾಡಲು ಈಗ ಪ್ರಾರಂಭ ಮಾಡಲಾಗಿದೆ. ಅದೇ ರೀತಿಯಾಗಿ ಕಳೆದ ಸಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹಣವು ಜಮಾ ಆಗದೆ ಇದ್ದ ಕಾರಣ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅನೇಕ ಮಹಿಳೆಯರಿಗೆ ಆರ್ಥಿಕತೆಯನ್ನು ಅನುಭವಿಸುತ್ತಾ ಇದ್ದರು.
ಈಗ ಈ ಒಂದು ವಿಷಯ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿತ್ತು. ಅಷ್ಟೇ ಅಲ್ಲದೆ ವಿರೋಧಪಕ್ಷಗಳ ಟೀಕೆಗಳ ನಡುವೆಯೂ ಕೂಡ ಸರಕಾರ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿರುವುದು. ಮಹಿಳೆಯರಿಗೆ ದೊಡ್ಡ ಸಿಹಿ ಸುದ್ದಿ ಒಂದನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಲಾಭಗಳು
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ ಮುಖ್ಯಸ್ಥರಿಗೆ ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಪ್ರಾರಂಭವಾದ ಈ ಒಂದು ಯೋಜನೆಯ ಮೂಲಕ ಈಗ ಪ್ರತಿ ತಿಂಗಳು ಮಹಿಳೆಯರು 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಸರ್ಕಾರವು ಜಮಾ ಮಾಡುತ್ತಾ ಇದೆ.
ಈಗ ಈ ಒಂದು ಯೋಜನೆ 2023 ರಲ್ಲಿ ಪ್ರಾರಂಭವಾಗಿ ಒಟ್ಟು ಬಜೆಟ್ ಸುಮಾರು 16,000 ಕೋಟಿಯನ್ನು ದಾಟಿದೆ ಎಂದು ಅಂದಾಜು ಮಾಡಲಾಗಿದೆ. ಗ್ರಾಮೀಣ ಹಾಗೂ ನಗರ ಮಹಿಳೆಯರಿಗೆ ಸಮಾನ ಲಾಭಗಳನ್ನು ಈಗ ನೀಡಲಾಗುತ್ತಿದೆ.
ಹಣ ಜಮಾ ಆಗದಿದ್ದರೆ ಏನು ಮಾಡಬೇಕು
- ಈಗ ನಿಮ್ಮ ಖಾತೆಗೆ ಹಣವು ಜಮಾ ಅಗದಿದ್ದರೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ ಖಾತೆಯನ್ನು ಪರಿಶೀಲನೆ ಮೊದಲು ಮಾಡಿಕೊಳ್ಳಿ.
- ತದನಂತರ ನೀವು ನಿಮ್ಮ ಬ್ಯಾಂಕ್ ಖಾತೆಗೆ ಸ್ಥಿತಿ ಅಂದರೆ NPCI ಮ್ಯಾಪಿಂಗ್ ಆಗಿದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿ.
- ಒಂದು ವೇಳೆ ನಿಮ್ಮ ಆಧಾರ ಕಾರ್ಡನ್ನು ಮಾಡಿ 10 ವರ್ಷ ಕಳೆದಿದ್ದರೆ ಅದನ್ನು ಕೂಡ ಅಪ್ಡೇಟ್ ಮಾಡಿಸಿಕೊಳ್ಳಿ.
ಬಾಕಿ ಹಣದ ಮಾಹಿತಿ
ಈಗ ಸಚಿವ ನೀಡಿದ ಮಾಹಿತಿ ಪ್ರಕಾರದ 24ನೇ ಕಂತಿನ ಹಣದ ಜೊತೆಗೆ ಈಗ ಈ ಹಿಂದೆ ಬಾಕಿ ಉಳಿದಂತ ಪ್ರತಿಯೊಂದು ಕಂತಿನ ಹಣ ಹಂತ ಹಂತವಾಗಿ ಬಿಡುಗಡೆ ಮಾಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದ್ದೇ ಎಂದು ಸರ್ಕಾರದ ಸ್ಪಷ್ಟ ಮಾಹಿತಿಯನ್ನು ನೀಡಿದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ 24 ನೇ ಕಂತಿನ ಹಣವನ್ನು ಪ್ರತಿ ಒಬ್ಬ ಮಹಿಳರ ಖಾತೆಗಳಿಗೆ ನಿನ್ನೆಯಿಂದ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದ್ದು. ಇನ್ನೂ ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳಾ ಖಾತೆಗಳಿಗೂ ಕೂಡ ಈ ಒಂದು 24ನೇ ಕಂತಿನ ಹಣವು ಜಮಾ ಆಗುವ ಸಾಧ್ಯತೆ ಇದೆ. ಆದಕಾರಣ ಇನ್ನು ಈ ಒಂದು ಹೊಸ ವರ್ಷದ ಒಳಗಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ 24ನೇ ಕಂತಿನ ಹಣವು ಬಂದು ಜಮಾ ಆಗುತ್ತದೆ.