Ganga Kalyana Yojane: ರಾಜ್ಯದ ಗ್ರಾಮೀಣ ಭಾಗದ ರೈತರಿಗೆದ ಸಿಹಿ ಸುದ್ದಿ? ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿರುವಂತಹ ಕ್ರಿಶ್ಚಿಯನ್ ಸಮುದಾಯದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಈಗ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಈಗ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಡೆಸುತ್ತಿರುವಂತಹ ಈ ಒಂದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಈಗ ಈ ಬಾರಿ ಕೃಷಿಯನ್ನು ರೈತರಿಗೆ ಈಗ ಸಂಪೂರ್ಣ ಸಹಾಯಧನದಲ್ಲಿ ಈಗ ಬೋರ್ವೆಲ್ ಅನ್ನು ಕೊರಿಸಲು ಸಹಾಯವನ್ನು ನೀಡಲಾಗುತ್ತದೆ.

ಅದೇ ರೀತಿಯಾಗಿ ಈಗ ಈ ಒಂದು ಬೋರ್ವೆಲ್ ಅನ್ನು ಕೊರೆಸಿಕೊಳ್ಳಲು ಹಾಗು ಪಂಪ್ ಸೆಟ್ ಅಳವಡಿಸಲು ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸುವುದು. ಈ ಒಂದು ಎಲ್ಲಾ ಸಮಸ್ಯೆಗಳಿಗೂ ಕೂಡ ಈಗ ಬಗೆಹರಿಸುವ ಉದ್ದೇಶದಿಂದಾಗಿ ಈಗ ಸರ್ಕಾರವು ಈ ಒಂದು ಯೋಜನೆ ಮೂಲಕ ಬೋರವೆಲ್ ಕೊರೆಸಲು ಈಗ ಸಹಾಯಧನವನ್ನು ನೀಡುತ್ತಾ ಇದೆ.
ಈಗ ಸ್ನೇಹಿತರೆ ನೀವೇನಾದ್ರೂ ಈ ಒಂದು ಉಚಿತ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ನಿಮಗೆ ಬೇಕಾಗುವಂತ ಪ್ರತಿಯೊಂದು ಅರ್ಹತೆಗಳು ಏನು ಹಾಗೂ ಬೇಕಾಗುವ ದಾಖಲೆಗಳು ಏನು ಹಾಗು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಯೋಜನೆಯ ಲಾಭಗಳು ಏನು?
ಈಗ ಈ ಒಂದು ಯೋಜನೆಗಳಿಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ ಮೊದಲು ಬೋರ್ವೆಲ್ ಕೊರೆಸುವಂತಹ ಪ್ರತಿಯೊಂದು ಖರ್ಚನ್ನು ಈಗ ಸರ್ಕಾರವು ನೋಡಿಕೊಳ್ಳುತ್ತದೆ. ಅದೇ ರೀತಿಯಾಗಿ ವಿದ್ಯುತ್ ಸಂಪರ್ಕಕ್ಕೆ ಬೇಕಾಗುವಂತ ಪ್ರತಿಯೊಂದು ಹಣವನ್ನು ಈಗ ನೇರವಾಗಿ ಸರ್ಕಾರವೇ ಹಣವನ್ನು ಪಾವತಿ ಮಾಡುತ್ತದೆ.
ದೊರೆಯುವ ಸಹಾಯಧನ ಎಷ್ಟು?
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅಭ್ಯರ್ಥಿಗಳಿಗೆ ಅಂದರೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಈಗ 4 ಲಕ್ಷದವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಈಗ ಬೋರ್ವೆಲ್ ಕೊರೆಸಲು ಸಬ್ಸಿಡಿಯನ್ನು ನೀಡಲಾಗುತ್ತದೆ. ಆನಂತರ ಇನ್ನುಳಿದಂತ ಪ್ರತಿಯೊಂದು ಜಿಲ್ಲೆಗಳಿಗೂ ಕೂಡ 3 ಲಕ್ಷದವರೆಗೆ ಬೋರವೆಲ್ ಕೊರೆಸಲು ಸಬ್ಸಿಡಿ ಅನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸ ಆಗಿರಬೇಕು.
- ಆನಂತರ ಕನಿಷ್ಠ ಅವರು 18 ವರ್ಷ ವಯಸ್ಸನ್ನು ಹೊಂದಿರಬೇಕಾಗುತ್ತದೆ.
- ತದನಂತರ ಅವರು ಸ್ವಂತ ಜಮೀನನ್ನು ಹೊಂದಿರಬೇಕಾಗುತ್ತದೆ.
- ಆನಂತರ ಅವರ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಕನಿಷ್ಠ ರೈತರು ಒಂದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಭೂಮಿಯನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅಲ್ಪಸಂಖ್ಯಾತ ಪ್ರಮಾಣ ಪತ್ರ
- ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರ
- RTC
- ಭೂ ಕಂದಾಯ ರೆಸೀದಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಸ್ವಯಂ ಘೋಷಣ ಪತ್ರ
- ಬ್ಯಾಂಕ್ ಖಾತೆಗೆ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಜಿಲ್ಲೆಯ KMDC ಕಚೇರಿಗೆ ಭೇಟಿಯನ್ನು ನೀಡಿ. ಅಲ್ಲಿರುವ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸಲ್ಲಿಸಿ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.