E Swattu 2.0 Applying Start: ಈ ಸ್ವತ್ತು ಅರ್ಜಿ ಸಲ್ಲಿಕೆಗಳು ಪ್ರಾರಂಭ! ಮೊಬೈಲ್ ಮೂಲಕ ಈಗಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಪರಿವರ್ತನೆ ಆದೇಶವಿಲ್ಲದೆ ಈಗ ನಿರ್ಮಿಸಿರುವ ಮನೆಗಳು ಮತ್ತು ನಿವಾಸಗಳು ಈಗ ಸಾವಿರಾರು ಕುಟುಂಬಗಳ ಜೀವನದಲ್ಲಿ ದೊಡ್ಡ ಸಮಸ್ಯೆಯಾಗಿ ಆಗಿದೆ. ಇದರಿಂದಾಗಿ ಈಗ ಮೂಲಭೂತ ಸೌಲಭ್ಯಗಳು, ಸಾಲದ ಸೌಲಭ್ಯಗಳು ಮತ್ತು ಆಸ್ತಿ ಮಾಲೀಕತ್ವದಲ್ಲಿ ಈಗ ತೊಂದರೆಗಳು ಎದುರಾಗುತ್ತ ಇವೆ.

ಅಷ್ಟೇ ಅಲ್ಲದೆ ಈಗ ಈ ಒಂದು ಸಮಸ್ಯೆಗೆ ಈಗ ಶಾಶ್ವತ ಪರಿಹಾರವಾಗಿ ನಮ್ಮ ಕರ್ನಾಟಕ ಸರ್ಕಾರವು ಈ ಸ್ವತ್ತು 2.0 ಡಿಸೆಂಬರ್ 1 2025 ರಂದು ಪ್ರಾರಂಭ ಮಾಡಿದೆ. ಅದೇ ರೀತಿಯಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಆದಂತಹ ಸಿದ್ದರಾಮಯ್ಯನವರು ಈ ಒಂದು ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಈಗ ಈ ಒಂದು ಡಿಜಿಟಲ್ ಕ್ರಾಂತಿಯ ಮೂಲಕ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ನಿವಾಸಿಗಳಿಗೆ ಅಧಿಕೃತ ಮಾನ್ಯತೆಯನ್ನು ನೀಡಿ. ಈ ಸ್ವತ್ತು ಪಡೆಯಲು ಈಗ ಮನೆಯಲ್ಲಿ ಕುಳಿತು ಅಪ್ಲಿಕೇಶನ್ ಸಲ್ಲಿಸಲು ಈಗ ಅವಕಾಶವನ್ನು ನೀಡಲಾಗಿದೆ.
ಈಗ ನಮ್ಮ ರಾಜ್ಯಾದ್ಯಂತ 90 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಈಗ ಈ ಒಂದು ಯೋಜನೆ ಅಡಿಯಲ್ಲಿ ಸೇರಲಾಗುತ್ತವೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲದೆ ಇದರ ಮೂಲಕ ಗ್ರಾಮೀಣ ಜನರ ಆಸ್ತಿ ದಾಖಲೆಗಳು ಪಾರದರ್ಶಕ ಮತ್ತು ಡಿಜಿಟಲ್ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಈ ಒಂದು ಯೋಜನೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಈಗ ಕೆಲಸವನ್ನು ನಿರ್ವಹಣೆ ಮಾಡುತ್ತದೆ.
ಈಗ ನೀವು ಕೂಡ ಈ ಸ್ವತ್ತು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏನು? ದಾಖಲೆಗಳು ಏನು ಮತ್ತು ಪರಿಶೀಲನೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಸ್ವತ್ತು ಯೋಜನೆಯೆಂದರೆ ಏನು?
ಈಗ ಈ ಒಂದು ಈ ಸ್ವತ್ತು ಯೋಜನೆ ಅಂದರೆ ಈಗ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವಂತಹ ಅಕ್ರಮ ನಿವಾಸಗಳು ಈಗ ಅಧಿಕೃತ ಮಾನ್ಯತೆ ನೀಡುವ ಡಿಜಿಟಲ್ ವ್ಯವಸ್ಥೆಯನ್ನು ಈಗ ಈ ಸ್ವತ್ತು ಅನ್ನಲಾಗುತ್ತದೆ. ಇದರ ಮೂಲಕ ಈಗ ಕುಟುಂಬಗಳು ಆಸ್ತಿ ಮಾಲಿಕತ್ವದ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆ ಇದು ಸಾಲ ವಿದ್ಯುತ್ ಸಂಪರ್ಕ ನೀರು ಸರಬರಾಜು ಮತ್ತು ಇದರ ಸೌಲಭ್ಯಗಳಿಗೆ ಬಾಗಿಲನ್ನು ತೆರೆದಂತಾಗುತ್ತದೆ.
ಅಷ್ಟೇ ಅಲ್ಲದೆ ಈಗ ಗ್ರಾಮೀಣ ಆಸ್ತಿ ದಾಖಲೆಗಳನ್ನು ಡಿಜಿಟಲ್ ಮಾಡಿ ಅಕ್ರಮಗಳನ್ನು ಸಕ್ರಿಯಗೊಳಿಸುವುದು. ಹಾಗೆಯೇ ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ. ತೆರಿಗೆ ಸಂಗ್ರಹವನ್ನು ಹೆಚ್ಚಿಗೆ ಮಾಡುವುದು. ಹಾಗೆ ಈಗ 90 ಲಕ್ಷ ಈ ಸ್ವತ್ತುಗಳನ್ನು ಕವರ್ ಮಾಡಿ. 2025ರ ಅಂತ್ಯದೊಳಗಾಗಿ 50% ಡಿಜಿಟಲ್ ಮಾಡುವ ಗುರಿಯನ್ನು ಈ ಒಂದು ಯೋಜನೆಯು ಹೊಂದಿದೆ.
ಅದೇ ರೀತಿಯಾಗಿ ಈ ಒಂದು ಯೋಜನೆಯು ಪಂಚತಂತ್ರ ತಂತ್ರಾಂಶದೊಂದಿಗೆ ಸಂಯೋಜನೆಯಾಗಿದ್ದು. ಈಗ ಅರ್ಜಿ ಸಲ್ಲಿಕೆಯ ನಂತರ ಸ್ಥಳೀಯ ಪರಿಶೀಲನೆ ಮೂಲಕ 15 ದಿನದ ಒಳಗಾಗಿ ಈ ಖಾತ ಜನರೇಟ್ ಆಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ನೊಂದಾಯಿತ ಪ್ರಮಾಣ ಪತ್ರ
- ಆರ್ ಟಿ ಸಿ
- ಭೂ ಪರಿವರ್ತನೆಯ ಆದೇಶ
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಿದ್ಯುತ್ ಬಿಲ್
- ತೆರಿಗೆ ಪಾವತಿ ರಶೀದಿ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಕೂಡ ಈಗ ಈ ಒಂದು ಈ ಸ್ವತ್ತು ಅಪ್ಲೈ ಮಾಡಲು ಈಗ ನಾವು ಈ ಕೆಳಗೆ ನೀಡಿರುವ ವೆಬ್ಸೈಟ್ನ ಮೇಲೆ ನೀವು ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿ. ಓಟಿಪಿ ಮೂಲಕ ಲಾಗಿನ್ ಆಗಿ.
- ಆನಂತರ ಅದರಲ್ಲಿ ನಿಮ್ಮ ಆಸ್ತಿ ವಿವರಗಳು ಹಾಗೂ ನಿಮ್ಮ ಕುಟುಂಬ ಸದಸ್ಯರ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಆನಂತರ ನೀವು ಅದರಲ್ಲಿ ಅದಕ್ಕೆ ಬೇಕಾಗಿರುವ ಕೆಲವೊಂದಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಆನಂತರ ನೀವು ಭರ್ತಿ ಮಾಡಿದೆ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಕೆ ಮಾಡಿ.
LINK : Apply Now
ಒಂದು ವೇಳೆ ನೀವೇನಾದರೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವ ಗ್ರಾಮ ಪಂಚಾಯಿತಿ ಅಥವಾ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ನೀವು ಈ ಒಂದು ಈ ಸ್ವತ್ತು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.