E Shram Card Apply Start: ಪ್ರತಿ ತಿಂಗಳು 3000 ಹಣ ಪಡೆಯಿರಿ, ಇಲ್ಲಿದೆ ನೋಡಿ ಸರ್ಕಾರದ ಹೊಸ ಯೋಜನೆ!
ಈಗ ನಮ್ಮ ಭಾರತದ ಸಂಘಟಿತ ವಲಯದ ಕಾರ್ಮಿಕರು, ದಿನಗೂಲಿ ಕೆಲಸಗಾರರು, ಆಟೋ ಚಾಲಕರು, ರೈತರು, ನಿರ್ಮಾಣ ಕಾರ್ಮಿಕರು ಮತ್ತು ತರಕಾರಿ ಮಾರುವವರು ಇತರೆ ಹಲವಾರು ರೀತಿಯ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಕಷ್ಟವನ್ನು ಪಡುತ್ತಾ ಇದ್ದಾರೆ. ಈಗ ಇಂತಹ ಕಾರ್ಮಿಕರಿಗೆ ಸಹಾಯವಾಗಿ ಈಗ ಕೇಂದ್ರ ಸರ್ಕಾರ 2021 ರಲ್ಲಿ ಪ್ರಾರಂಭಿಸಿದಂತಹ ಈ ಒಂದು ಇ ಶ್ರಮ ಯೋಜನೆ ಒಂದು ಮಹತ್ವದ ಸಾಧನವಾಗಿ ಬದಲಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ 2025ರಲ್ಲಿ ಈ ಒಂದು ಯೋಜನೆಯು ಮತ್ತಷ್ಟು ಬಲಪಡಿಸಲಾಗಿದ್ದು. ಈಗ ಡೆಲಿವರಿ ಬಾಯ್ಗಳು, ಕ್ಯಾಬ್ ಡ್ರೈವರ್ಗಳು, ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಕೆಲಸವನ್ನು ಮಾಡುವರನ್ನು ಕೂಡ ಈ ಒಂದು ಯೋಜನೆಗೆ ಸೇರಿಕೆ ಮಾಡಲಾಗಿದೆ. ಈ ಒಂದು ಕಾರ್ಡ್ ನ ಮೂಲಕ ಈಗ ಕಾರ್ಮಿಕರು ವೃದ್ಧಾಪ್ಯದಲ್ಲಿ ಮಾಸಿಕ ಪಿಂಚಣಿ ಅಥವಾ ಅಪಘಾತ ವಿಮೆ, ಆರ್ಥಿಕ ನೆರವುಗಳ ಪ್ರಯೋಜನಗಳನ್ನು ಈಗ ಪಡೆದುಕೊಳ್ಳಬಹುದು.
ಈಗ ನೀವು ಕೂಡ ಈ ಒಂದು ಇ ಶ್ರಮ ಕಾರ್ಡ್ ಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು, ಅರ್ಹತೆಗಳು ಏನು ಮತ್ತು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.
ಇ ಶರ್ಮ ಕಾರ್ಡ ಅಂದರೆ ಏನು?
ಈಗ ಈ ಒಂದು ಕಾರ್ಡ್ ಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಡಿಜಿಟಲ್ ಗುರುತಿನ ಚಿಹ್ನೆಯಾಗಿದ್ದು. ಈ ಒಂದು ಪೋರ್ಟಲ್ ಅನ್ನು ಶ್ರಮ ಮತ್ತು ಉದ್ಯೋಗ ಸಚಿವಾಲಯವು 2021 ಆಗಸ್ಟ್ ನಲ್ಲಿ ಪ್ರಾರಂಭ ಮಾಡಿದ್ದು ಮತ್ತು 2025ರ ವೇಳೆಗೆ 30 ಕೋಟಿ ಹೆಚ್ಚು ಕಾರ್ಮಿಕರು ಇದರಲ್ಲಿ ನೋಂದಾವಣೆಯನ್ನು ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಸಂಘಟಿತ ಕಾರ್ಮಿಕರ ಡೇಟಾಬೇಸ್ ಅನ್ನು ಬಳಕೆ ಮಾಡಿ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನಗಳನ್ನು ಸುಲಭವಾಗಿ ಒದಗಿಸುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿಯಾಗಿ ಈಗ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ಟೀಂ ಇಂಡಿಯಾ ಯೋಜನೆಗಳನ್ನು ತಾವುಗಳನ್ನು ಒಂದೇ ಕಾರ್ಡ್ ಮೂಲಕ ಪಡೆದುಕೊಳ್ಳಬಹುದು.
ಇ ಶ್ರಮ ಕಾರ್ಡ್ ನ ಪ್ರಯೋಜನಗಳು ಏನು?
- ಈಗ ಈ ಒಂದು ಯೋಜನೆ ಮೂಲಕ 60 ವರ್ಷ ದಾಟಿದ ನಂತರ ನೋಂದಾಯಿಸಿದ ಕಾರ್ಮಿಕರು ಪ್ರತಿ ತಿಂಗಳು 3000 ವರೆಗೆ ಪಿಂಚಣಿಯನ್ನು ಪಡೆದುಕೊಳ್ಳಬಹುದು.
- ಆನಂತರ ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ನೋಂದಾವಣೆಯನ್ನು ಮಾಡಿಕೊಂಡರೆ ತಿಂಗಳಿಗೆ 6000 ಹಣವನ್ನು ಪಡೆದುಕೊಳ್ಳಬಹುದು.
- ಆನಂತರ ಕೆಲಸದ ಸಂದರ್ಭದಲ್ಲಿ ಅಥವಾ ಯಾವುದೇ ಅನಿರೀಕ್ಷಿತ ಘಟನೆ ಇಂದಾಗಿ ಮರಣವನ್ನು ಹೊಂದಿದರೆ ಕುಟುಂಬಕ್ಕೆ 2 ಲಕ್ಷದವರೆಗೆ ವಿಮೆಯನ್ನು ನೀಡಲಾಗುತ್ತದೆ.
- ಒಂದು ವೇಳೆ ನೀವು ಅಪಘಾತದಿಂದ ಕೆಲಸಕ್ಕೆ ಸಾಧ್ಯವಾಗದೇ ಇದ್ದರೆ 1 ಲಕ್ಷದವರೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
- ಆನಂತರ ಈಗ ಈ ಒಂದು ಯೋಜನೆ ಅರ್ಜಿ ಸಲ್ಲಿಸಲು 16 ವಯಸ್ಸಿನಿಂದ 29 ವರ್ಷದ ಒಳಗೆ ಇರಬೇಕು.
- ಆನಂತರ ದಿನಗೂಲಿ ಕಾರ್ಮಿಕರು, ಕೃಷಿ ರೈತರು, ಬೀದಿ ವ್ಯಾಪಾರಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಉದ್ಯೋಗ ಪ್ರಮಾಣ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನೋಂದಾಯಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರನ್ನು ಎಂಟರ್ ಮಾಡಿ.
- ಆನಂತರ ಅದರಲ್ಲಿ ಒಟಿಪಿ ಮೂಲಕ ದೃಢೀಕರಿಸಿ ವೈಯಕ್ತಿಕ ಮಾಹಿತಿಗಳನ್ನು ಅದರಲ್ಲಿ ಭರ್ತಿ ಮಾಡಿ.
- ಆನಂತರ ಅದಕ್ಕೆ ಬೇಕಾಗಿರುವಂತ ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಸಲ್ಲಿಕೆಯನ್ನು ಸಲ್ಲಿಕೆ ಮಾಡಿ.
- ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ದವರೆಗೆ ಹಣವನ್ನು ಪಡೆದುಕೊಳ್ಳಬಹುದು.