Bele Vime Register Started: ರೈತರ ಬೆಳೆ ವಿಮೆ ನೋಂದಣಿ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ನಮ್ಮ ರಾಜ್ಯದ ರೈತರಿಗೆ ಮತ್ತು ಮಹತ್ವ ಮಾಹಿತಿಯನ್ನು ನೀಡಿದ್ದಾರೆ. ಈಗ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಹಿಂಗಾರು ಮತ್ತು ಬೇಸಿಗೆ ಹಂಗಾಮನ ಬೆಳೆಗಳಿಗೆ ವಿಮೆ ನೋಂದಣಿ ಪ್ರಕ್ರಿಯೆ ಈಗ ಪ್ರಾರಂಭವಾಗಿದೆ. ಹಾಗೆ ಕೃಷಿ ಇಲಾಖೆಯ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರಿಂದ ಈಗ ಕೂಡಲೇ ಒಂದು ವಿಮೆ ಮಾಡಲು ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ.

ಈ ಒಂದು ಯೋಜನೆ ಮುಖ್ಯ ಉದ್ದೇಶ ಏನು?
ಈಗ 2016ರಲ್ಲಿ ಪ್ರಾರಂಭವಾದಂತ ಈ ಒಂದು ಯೋಜನೆಯ ಉದ್ದೇಶವು ಏನೆಂದರೆ ಈಗ ರೈತರ ಆರ್ಥಿಕ ಸುರಕ್ಷತೆಯನ್ನು ಹೆಚ್ಚಿಸುವುದು, ಕಡಿಮೆ ಪ್ರೀಮಿಯಂ ದರದಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಸಂಪೂರ್ಣ ಅಥವಾ ಭಾಗಿಕ ಬೆಳೆ ನಷ್ಟಕ್ಕೆ ಪರಿಹಾರವನ್ನು ನೀಡಲು ಈಗ ಈ ಒಂದು ಯೋಜನೆಯನ್ನು ರೂಪಾಂತರ ಮಾಡಲಾಗಿದೆ.
ಅದೇ ರೀತಿಯಾಗಿ ಈಗ ಬಿತ್ತನೆಯಿಂದ ಹಿಡಿದು ಕಟಾವುವರೆಗೂ ರೈತರಿಗೆ ವಿಮೆಯ ರಕ್ಷಣೆ ಲಭ್ಯವಿರುತ್ತದೆ. ಹಾಗೆಯೇ ಮಳೆ ಕೊರತೆ, ಆಲಿಕಲ್ಲು, ಗಾಳಿ, ಬೆಂಕಿ ಇನ್ನೂ ಹಲವಾರು ರೀತಿಯ ನಷ್ಟಗಳಿಗೆ ಈಗ ಪರಿಹಾರವನ್ನು ನೀಡಲಾಗುತ್ತದೆ.
ಈಗ ಈ ಒಂದು ಯೋಜನೆಯ ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಬೆಳೆಗಳ ವಿಂಗಡನೆ ಮಾಡಿ .ವಿಮೆ ನೋಂದಣಿ ಮಾಡಲು ಈಗ ಅವಕಾಶವನ್ನು ನೀಡಲಾಗಿದೆ. ಅರ್ಹ ರೈತರು ಈಗ ಅಂದರೆ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಹ ಬೆಳೆಗಳ ಪಟ್ಟಿ
ಹಿಂಗಾರು ಹಂಗಾಮು
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆದಂತ ಜೋಳ, ಕಡಲೆ ಈ ಒಂದು ಬೆಳೆಗಳಿಗೆ ಈಗ ವಿಮೆಯನ್ನು ಮಾಡಿಸಬಹುದು.
ಹೋಬಳಿ ಮಟ್ಟದಲ್ಲಿ ಈಗ ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಬೆ, ಈರುಳ್ಳಿ ಈ ಒಂದು ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು.
ಬೇಸಿಗೆ ಹಂಗಾಮು
ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇಂಗಾ ಮತ್ತು ಭತ್ತ ಬೆಳೆಗಳಿಗೆ ಈಗ ವಿಮೆಯನ್ನು ಮಾಡಿಸಬಹುದು.
ಹಾಗೆ ಹೋಬಳಿ ಮಟ್ಟದಲ್ಲಿ ಸೂರ್ಯಕಾಂತಿ ಈರುಳ್ಳಿ ಬೆಳೆಗಳಿಗೆ ಮಾಡಿಸಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಬಿತ್ತನೆಯ ಪುರಾವೆಗಳು
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆಗೆ ವಿವರ
- ಭೂ ದಾಖಲೆಗಳು
ನೋಂದಣಿ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಬೆಳೆ ವಿಮೆ ನೋಂದಣಿ ಮಾಡಿಸಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಸೂಚನೆಗಳನ್ನು ಅನುಸರಿಸಿ ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡುವುದರ ಮೂಲಕ ನಂತರ ಅದರಲ್ಲಿ ಆನ್ಲೈನ್ ಮೂಲಕ ಪ್ರೀಮಿಯಂ ಪಾವತಿ ಮಾಡಿ. ಬೆಳೆ ವಿಮೆಗೆ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.