Amruta Swabhimani Kurigahi Yojane: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸರ್ಕಾರದಿಂದ 43,750 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಹಲವಾರು ಕುಟುಂಬಗಳಿಗೆ ಪ್ರಮುಖವಾದಂಥ ಆದಾಯದ ಮೂಲವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ಈಗ ಕೇವಲ ಉದ್ಯೋಗ ಸೂಚಿಸುವುದಲ್ಲದೆ ಈಗ ಮಾಂಸ ಮತ್ತು ಉಣ್ಣೆಯ ಉತ್ಪಾದನೆಯ ಮೂಲಕ ರಾಜ್ಯದ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತಿದೆ.

ಈಗ ನಮ್ಮ ರಾಜ್ಯ ಸರ್ಕಾರವು ಈ ಒಂದು ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ಮಾಡಿದ್ದು. ಈ ಒಂದು ಯೋಜನೆಯ ಆರ್ಥಿಕವಾಗಿ ಹಿಂದುಳಿದ ರೈತರು ಮತ್ತು ಯುವಕರಿಗೆ ಕುರಿ ಸಾಕಾಣಿಕೆಗೆ ತೊಡಗಿಸಿಕೊಳ್ಳುವ ಸಹಾಯವನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ಹಾಗೂ ಯಾವ ರೀತಿಯಾಗಿ ದಾಖಲೆಗಳನ್ನು ನೀಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಯೋಜನೆಯ ಉದ್ದೇಶ
ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ ಈಗ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶವನ್ನು ಸೃಷ್ಟಿ ಮಾಡುವುದು ಮತ್ತು ಸಾಂಪ್ರದಾಯಿಕ ಕುರಿ ಕಾಹಿ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ.
ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಲ್ಲಿ ಮಾಂಸ ಮತ್ತು ಉಣ್ಣೆ ಉತ್ಪಾದನೆಯನ್ನು ಹೆಚ್ಚಿಗೆ ಮಾಡಿ. ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಮುಖ್ಯವಾದಂತ ಗುರಿಯಾಗಿದೆ. ಈಗ ಈ ಒಂದು ಯೋಜನೆಯು ವೈಜ್ಞಾನಿಕ ಸಾಕಾಣಿಕೆ ತರಬೇತಿಯನ್ನು ನೀಡಿ. ರೈತರನ್ನು ಆಧುನಿಕ ತಂತ್ರಗಳೊಂದಿಗೆ ಸಾಧ್ಯಗೊಳಿಸಲು ಇದು ಮುಖ್ಯ ಗುರಿಯನ್ನು ಹೊಂದಿದೆ.
ಸಹಾಯಧನದ ವಿವರ
ಈಗ ಈ ಒಂದು ಯೋಜನೆ ಮೂಲಕ ಒಂದು ಘಟಕವು 20 ಹೆಣ್ಣು ಕುರಿ ಅಥವಾ ಮೇಕೆಗಳನ್ನು ಮತ್ತು ಒಂದು ಗಂಡು ಟಗರು ಸೇರಿದಂತೆ ಹೊಂದಿರುತ್ತದೆ. ಈ ಒಂದು ಘಟಕದ ವೆಚ್ಚವು ಸುಮಾರು 1,75,000 ದವರೆಗೆ ಇರುತ್ತದೆ. ಅದರಲ್ಲಿ ಈಗ ಸರ್ಕಾರವು 50% ಸಹಾಯಧನವನ್ನು ನಿಮಗೆ ನೀಡುತ್ತಾ ಇದೆ.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳು ಆಗಿರಬೇಕು.
- ಹಾಗೆ ಅವರು ಕನಿಷ್ಠ 18 ವರ್ಷವನ್ನು ಮೇಲ್ಪಟ್ಟಿರಬೇಕು.
- ಆನಂತರ ಅವರು ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯನ್ನು ಹೊಂದಿರಬೇಕು.
- ಆನಂತರ ಅವರು ಸ್ಥಳೀಯ ಅಥವಾ ಜಿಲ್ಲಾ ಮಟ್ಟದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯರು ಆಗಿರಬೇಕು.
- ಈ ಒಂದು ಕುರಿ ಸಾಕಾಣಿಕೆಯನ್ನು ಮಾಡಲು ಉತ್ತಮವಾದಂತಹ ಜಾಗವನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತ ಪಶು ಇಲಾಖೆಗೆ ಭೇಟಿಯನ್ನು ನೀಡಿ. ಅಲ್ಲಿ ನೀವು ಈ ಒಂದು ಕುರಿಗಾಹಿ ಯೋಜನೆ ಬಗ್ಗೆ ಸಂಪೂರ್ಣವಾದಂತಹ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲಾತಿಗಳನ್ನು ನೀವು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಸಹಾಯಧನ ಪಡೆಯಬಹುದು.