Krushi Yantra Subsidy Scheme: ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸರಕಾರದಿಂದ 3 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ರೈತರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಿಮಗೆ ತಿಳಿದಿರುವಂತೆ ಸ್ನೇಹಿತರೆ ಎಲ್ಲ ರೈತರು ಕೂಡ ಈಗ ಕಾರ್ಮಿಕರ ಕೊರತೆಯಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ ಅಂದರೆ ಈಗ ಬಿತ್ತನೆಯಿಂದ ಹಿಡಿದು ಕೊಯ್ಲು ವರೆಗೆ ಕೆಲಸಗಳು ವಿಳಂಬವಾಗುತ್ತಾ ಇದ್ದು. ರೈತರಿಗೆ ಸಾಕಷ್ಟು ಬೆಳೆ ನಷ್ಟವಾಗುತ್ತ ಇದೆ. ಈಗ ಈ ಒಂದು ಸವಾಲುಗಳನ್ನು ಎದುರಿಸಲು ನಮ್ಮ ರಾಜ್ಯ ಸರ್ಕಾರವು ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಿಕೊಳ್ಳಲು ಈಗ ಸರ್ಕಾರದ ಕಡೆಯಿಂದ ಸಹಾಯಧನವನ್ನು ನೀಡುವಂತಹ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

ಅದೇ ರೀತಿಯಾಗಿ ಈಗ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಈಗ ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಲು ಈಗ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನು? ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಈ ಒಂದು ಯೋಜನೆ ಉದ್ದೇಶ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
ಯೋಜನೆಯ ಉದ್ದೇಶ ಏನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಯಾರೆಲ್ಲ ಕೃಷಿ ಯಾಂತ್ರೀಕರ್ಣಗಳನ್ನು ಖರೀದಿ ಮಾಡುತ್ತಾರೆ. ಅವರಿಗೆ ಸರಕಾರದಿಂದ ಸಹಾಯಧನವನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಈಗ ಕೃಷಿ ಕಾರ್ಯಗಳಲ್ಲಿ ಯಾಂತ್ರಿಕರಣವನ್ನು ಹೆಚ್ಚಿಗೆ ಮಾಡಿ. ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಅಷ್ಟೇ ಅಲ್ಲದೆ ಈಗ ರೈತರ ವೆಚ್ಚಗಳನ್ನು ಈಗ ತಗ್ಗಿಸಿ ಬೆಳೆ ನಷ್ಟವನ್ನು ತಪ್ಪಿಸುವುದು. ಅದೇ ರೀತಿಯಾಗಿ ರೈತರು ಉತ್ಪಾದಕತೆಯನ್ನು ಹೆಚ್ಚಿಗೆ ಮಾಡುವುದು. ಈ ಒಂದು ಯೋಜನೆಯ ಪ್ರಮುಖ ಉದ್ದೇಶವಾಗಿದ್ದು. ಈ ಒಂದು ಯೋಜನೆ ರಾಷ್ಟ್ರೀಯ ಕೃಷಿ ಮಿಷನೊಂದಿಗೆ ಒಟ್ಟುಗೂಡಿ ರೈತರಾಗಿ ಹೆಚ್ಚುವರಿ ಬೆಂಬಲವನ್ನು ನೀಡುತ್ತಾ ಇದೆ.
ಸಹಾಯಧನದ ಮಾಹಿತಿ
ಈಗ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿದಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಈಗ ಶೇಕಡ 90ರಷ್ಟು ಸಹಾಯಧನವನ್ನು ಅಂದರೆ ಗರಿಷ್ಠ 3 ಲಕ್ಷದವರೆಗೆ ಅವರಿಗೆ ಸಹಾಯಧನವನ್ನು ನೀಡಲಾಗುತ್ತದೆ.
ಆನಂತರ ಸಾಮಾನ್ಯ ರೈತರಿಗೂ ಕೂಡ ಅವರ ಯಂತ್ರದ ಖರೀದಿಯ ಬೆಲೆಯಲ್ಲಿ 50% ವರೆಗೆ ಸಹಾಯಧನ ಹಾಗೂ ಗರಿಷ್ಠ 3 ಲಕ್ಷದವರೆಗೆ ಸಹಾಯಧನವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
- RTC
- ಬ್ಯಾಂಕ್ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನಿಮ್ಮ ಹತ್ತಿರ ಇರುವಂತ ರೈತ ಸಂಪರ್ಕ ಕೃಷಿ ಇಲಾಖೆಗೆ ಭೇಟಿಯನ್ನು ನೀಡಿ. ಅಲ್ಲಿ ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಆನಂತರ ಅದಕ್ಕೆ ಬೇಕಾಗುವಂತ ಕೆಲವೊಂದು ಅಗತ್ಯ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.