Vidyasiri Scholarship: ವಿದ್ಯಾ ಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

Vidyasiri Scholarship: ವಿದ್ಯಾ ಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

ಈಗ ವಿದ್ಯಾರ್ಥಿಗಳಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಈಗ ತಿಂಗಳಿಗೆ 2000 ಸಹಾಯಧನವನ್ನು ನೀಡುವಂತಹ ಈ ಒಂದು ವಿದ್ಯಾರ್ಥಿಯ ವಿದ್ಯಾರ್ಥಿ ವೇತನವು ಈಗ ಅರ್ಜಿ ಸಲ್ಲಿಸುವಂತಹ ದಿನಾಂಕ ಮತ್ತೆ ವಿಸ್ತರಣೆಯಗೊಂಡಿದ್ದು. ಈಗ ವಿದ್ಯಾರ್ಥಿಗಳು ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Vidyasiri Scholarship

ಈಗ ಕರ್ನಾಟಕದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2025 26ರ ಶೈಕ್ಷಣಿಕ ಸಾಲಿನಲ್ಲಿ ಈಗ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು ಈಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕವನ್ನು ಈಗ 31 ಜನವರಿ 2026 ರ ವರೆಗೆ ವಿಸ್ತರಣೆಯನ್ನು ಮಾಡಿದೆ.

ಈಗ ನೀವು ಕೂಡ ಈ ಒಂದು ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ. ವಿದ್ಯಾಸಿರಿ ವಿದ್ಯಾರ್ಥಿ ವೇತನದ ಮೂಲಕ ಪ್ರತಿ ತಿಂಗಳು ಹಣವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಯಾರೆಲ್ಲಾ ಸಲ್ಲಿಕೆ ಮಾಡಬಹುದು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಹಾಗೂ ಏನೆಲ್ಲ ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ವಿದ್ಯಾಸಿರಿ ವಿದ್ಯಾರ್ಥಿ ವೇತನದ ಮಾಹಿತಿ

ಈಗ ಈ ಒಂದು ವಿದ್ಯಾಸಿರಿ ವಿದ್ಯಾರ್ಥಿವೇತನವು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಸುವಂತಹ ಒಂದು ಪ್ರಮುಖ ಸ್ಕಾಲರ್ಶಿಪ್ ಕಾರ್ಯಕ್ರಮವಾಗಿದೆ. ಈಗ 10ನೇ ತರಗತಿಯ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಈಗ ಆರ್ಥಿಕ ಸಹಾಯಧನವನ್ನು ನೀಡುವಂತಹ ಉದ್ದೇಶವನ್ನು ಈ ಒಂದು ವಿದ್ಯಾರ್ಥಿ ವೇತನ ಹೊಂದಿದೆ.

ಈಗ ಮುಖ್ಯವಾಗಿ ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಹಾಗೂ ಊಟ ಮತ್ತು ವಸತಿ ಸಹಾಯವನ್ನು ಒದಗಿಸುವುದು. ಇದರ ಮುಖ್ಯ ಉದ್ದೇಶವಾಗಿದ್ದು. ಈಗ 2025 26 ನೇ ಸಾಲಿನಲ್ಲಿ ಯಾರೆಲ್ಲಾ ವೃತ್ತಿಪರ ಕೋರ್ಸ್ ಗಳಲ್ಲಿ  ವಿದ್ಯಾಭ್ಯಾಸ ಮಾಡುತ್ತಿದ್ದರೆ. ಅಂತ ಅವರು ಈಗ ಈ ಒಂದು ವಿದ್ಯಾರ್ಥಿ ವೇತನದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು ಏನು?

  • ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
  • ಹಾಗೆ ಅವರು ಹಿಂದಿನ ತರಗತಿಗಳಲ್ಲಿ ಕನಿಷ್ಠ 40% ಅಂಕಗಳೊಂದಿಗೆ ಪಾಸಾಗಿರಬೇಕಾಗುತ್ತದೆ.
  • ಹಾಗೆ ಅವರು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಇರಬೇಕು.
  • ಆನಂತರ ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅವಕಾಶ.
  • ಹಾಗೆ ಅವರ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಅಂಕ ಪಟ್ಟಿಗಳು
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ
  • ಕಾಲೇಜು ಐಡಿ ಕಾರ್ಡ್
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗಳಿಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ನೀವು ಅದ್ರಲ್ಲಿ ನಿಮ್ಮ ಹೊಸ ಬಳಕೆದಾರರಾಗಿದ್ದರೆ ಆಧಾರ್ ಕಾರ್ಡ್ ಮೊಬೈಲ್ ನಂಬರನ್ನು ಬಳಕೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳು ಶೈಕ್ಷಣಿಕ ಮಾಹಿತಿಗಳು ಹಾಗೂ ಆದಾಯದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನೀವು ಅದರಲ್ಲಿ ಬೇಕಾಗುವಂತ ಕೆಲವೊಂದು ಅಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಆನಂತರ ನೀವು ಭರ್ತಿ ಮಾಡುವ ದಾಖಲೆಗಳು ಸರಿಯಾಗಿದ್ದರೆ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿಯನ್ನು ಸಲ್ಲಿಕೆ ಮಾಡಿ.

LINK : Apply Now 

WhatsApp Float Button

Leave a Comment

error: Content is protected !!