Yuvanidhi Plus Yojane: ಯುವನಿಧಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪ್ರತಿ ತಿಂಗಳು 3,000 ಜೊತೆಗೆ AI ವಾಹನ ತರಬೇತಿ ಪಡೆಯಿರಿ.

Yuvanidhi Plus Yojane: ಯುವನಿಧಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪ್ರತಿ ತಿಂಗಳು 3,000 ಜೊತೆಗೆ AI ವಾಹನ ತರಬೇತಿ ಪಡೆಯಿರಿ.

WhatsApp Float Button

ಈಗ ಕರ್ನಾಟಕದ ಯುವಶಕ್ತಿಯು ಉದ್ಯೋಗ ಹುಡುಕಾಟದಲ್ಲಿ ಈಗ ಸಂಕಷ್ಟ ಪಡುತ್ತಾ ಇರುವಾಗ ನಮ್ಮ ಸರಕಾರ ಯುವನಿಧಿ  ಯೋಜನೆಯನ್ನು ಈಗ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಯುವನಿಧಿ ಪ್ಲಸ್ ಎಂಬ ಹೊಸ ಉಪಕ್ರಮವನ್ನು ಈಗ ಜಾರಿಗೆ ಮಾಡಿದ್ದು. ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿ ನಿರುದ್ಯೋಗಿಯಾಗಿರುವಂತ ಯುವಕರಿಗೆ ಈಗ ಪ್ರತಿ ತಿಂಗಳು ಈ ಒಂದು ಯೋಜನೆ ಅಡಿಯಲ್ಲಿ 3000 ದ ಜೊತೆಗೆ  ಉನ್ನತ ಕೌಶಲ್ಯ ತರಬೇತಿ ನೀಡಲು ಮುಂದಾಗಿದೆ.

Yuvanidhi Plus Yojane

ಈಗ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮೂಲಕ ಈ ಒಂದು ಯೋಜನೆಯು ಈಗ ಎಲೆಕ್ಟ್ರಿಕಲ್ ವಾಹನಗಳು, ಕೃತಕ ಬುದ್ಧಿಮತ್ತೆ, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಆಧುನಿಕ ಕ್ಷೇತ್ರಗಳಲ್ಲಿ ಈಗ ಉಚಿತ ತರಬೇತಿಗಳನ್ನು ನೀಡಿ. ಯುವಕರನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡುವ ಗುರಿಯನ್ನು ಈ ಒಂದು ಯೋಜನೆಯು ಈಗ ಹೊಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಯ ವಿಶೇಷತೆಗಳು ಮತ್ತು ಅರ್ಹತೆಗಳು ಹಾಗೆ ಲಭ್ಯವಿರುವ ಕೋರ್ಸ್ ಗಳು ಹಾಗೆ ಅರ್ಜಿಯನ್ನು  ಯಾವ ರೀತಿ ಸಲ್ಲಿಸಬೇಕೆಂಬುದರ ಸಂಪೂರ್ಣ ಮಾಹಿತಿ ಇದೆ.

ಯುವನಿಧಿ ಪ್ಲಸ್ ಯೋಜನೆಯ ಮಾಹಿತಿ

ಈಗ ಈ ಒಂದು ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಯುವಕರಿಗೆ ಈಗ ತಿಂಗಳಿಗೆ 3000 ಅಥವಾ 1500 ವರೆಗೆ ಸಹಾಯಧನವನ್ನು ಅವರಿಗೆ ನೀಡಲಾಗುತ್ತಿದೆ. ಈಗ ಈ ಒಂದು ಯುವನಿಧಿ ಪ್ಲಸ್ ಆವೃತ್ತಿಯೊಂದಿಗೆ ಬಂದಿರುವಂತಹ ಈ ಒಂದು ಯೋಜನೆ ಅಡಿಯಲ್ಲಿ ಈಗ ಉಚಿತ ತರಬೇತಿಯ ಮೂಲಕ ಯುವಕರನ್ನು ಉದ್ಯೋಗ ಮಾರುಕಟ್ಟೆಗೆ ರೆಡಿ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಈಗ ಈ ಒಂದು ಯೋಜನೆ ಅಡಿಯಲ್ಲಿ ನಿರುದ್ಯೋಗದ ಅವಧಿಯಲ್ಲಿ ದೈನಂದಿನ ಖರ್ಚುಗಳಿಗೆ ಸಹಾಯವನ್ನು ಈಗ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತಿದೆ. ಈಗಾಗಲೇ 40ಕ್ಕು ಹೆಚ್ಚು ಕೋರ್ಸ್ ಗಳು ಈಗ ಉಚಿತ ತರಬೇತಿಗಳನ್ನು ನೀಡಲಾಗುತ್ತಿದ್ದು. ಈ ಒಂದು ತರಬೇತಿಗಳನ್ನು ಪಡೆಯಲು ಈಗ 3 ರಿಂದ 6 ತಿಂಗಳವರೆಗೆ ತರಬೇತಿ ಹಾಗೂ ಸರ್ಟಿಫಿಕೇಟ್ ನೊಂದಿಗೆ ನಿಮಗೆ ಉದ್ಯೋಗ ಸಹಾಯವನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಯ ಲಾಭಗಳನ್ನು ಪಡೆಯಲು ಮೊದಲು ಯುವನಿಧಿ ಯೋಜನೆಯಲ್ಲಿ ನೋಂದಾಯಿತರಾಗಿರಬೇಕು.
  • ಆನಂತರ ಅವರು ಶಿಕ್ಷಣ ಮುಗಿದ ನಂತರ ಕನಿಷ್ಠ 6 ತಿಂಗಳ ಉದ್ಯೋಗವಿಲ್ಲದೆ ಇರಬೇಕು.
  • ಹಾಗೆ ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಿರುವವರು ಈ ಯೋಜನೆಗೆ ಅರ್ಹರಿರುವುದಿಲ್ಲ.
  • ಆನಂತರ ಯಾವುದಾದರೂ ಉದ್ಯೋಗವನ್ನು ಮಾಡುತ್ತಿರುವವರು ಕೂಡ ಈ ಒಂದು ತರಬೇತಿ ಪಡೆಯಲು ಅರ್ಹ ಇರುವುದಿಲ್ಲ.
  • ಆನಂತರ ಈ ಒಂದು ತರಬೇತಿ ಪಡೆಯಲು ಅಭ್ಯರ್ಥಿಗಳು 18 ರಿಂದ 35 ವರ್ಷದ ನಡುವೆ ಇರಬೇಕು.
  • ಆನಂತರ ಅವರು 2022 23 ಅಥವಾ 2023 24 ರಲ್ಲಿ ಪದವಿ ಅಥವಾ ಡಿಪ್ಲೋಮೋ ಅನ್ನು ಪಾಸ್ ಆಗಿರಬೇಕು.

ಲಭ್ಯವಿರುವ ಕೋರ್ಸುಗಳು

  • ತಾಂತ್ರಿಕ ಕೋರ್ಸುಗಳು: ಎಲೆಕ್ಟ್ರಿಕಲ್ ವಾಹನಗಳ ತಂತ್ರಜ್ಞಾನ, CMC  ಮೆಷಿನರಿ, ಮೆಕಾನಿಕಲ್ ಆಟೋಮೇಶನ್.
  • ಡಿಜಿಟಲ್ ಕೌಶಲ್ಯಗಳು: ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಮಾರ್ಕೆಟಿಂಗ್.
  • ವೃತ್ತಿಪರ ಕೋರ್ಸ್ಗಳು: ಫ್ಯಾಶನ್ ಡಿಸೈನಿಂಗ್, ವೆಲ್ಡಿಂಗ್, ಆಟೋಮೊಬೈಲ್ ಸರ್ವಿಸಿಂಗ್.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ವಾಸಸ್ಥಳದ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಬ್ಯಾಂಕ್ ಖಾತೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಮೊದಲು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಮೊಬೈಲ್ ನಂಬರ್ ನ ಮೂಲಕ ಆ ಒಂದು ವೆಬ್ಸೈಟ್ನಲ್ಲಿ ಲಾಗಿನ್ ಆಗಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನೀವು ಯಾವ ತರಬೇತಿಯನ್ನು ಪಡೆದುಕೊಳ್ಳಲು ಇಷ್ಟಪಡುತ್ತೀರೋ ಆ ಒಂದು ತರಬೇತಿ ಆಯ್ಕೆಯನ್ನು ಮಾಡಿಕೊಳ್ಳಬೇಕು.
  • ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಮಂಜೂರಾತಿ ಅನ್ನು ಪಡೆದುಕೊಳ್ಳಬಹುದು.
WhatsApp Group Join Now
Telegram Group Join Now

Leave a Comment

error: Content is protected !!