Good News For Farmers: ರೈತರಿಗೆ ಮತ್ತೊಂದು ಸಿಹಿ ಸುದ್ದಿ? ಹೊಲಕ್ಕೆ ರಸ್ತೆ ನಿರ್ಮಾಣ ಮಾಡಲು ಸರ್ಕಾರದಿಂದ 12.5 ಲಕ್ಷದವರೆಗೆ ಸಹಾಯಧನ!
ಈಗ ನಮ್ಮ ರಾಜ್ಯದ ಅನೇಕ ರೈತರಿಗೆ ಕೃಷಿಯ ಪ್ರಮುಖ ಸಮಸ್ಯೆಗಳು ಅಂದರೆ ಹೊಲಕ್ಕೆ ಸರಿಯಾದ ರಸ್ತೆ ಸಂಪರ್ಕದ ಕೊರತೆ ಈಗ ಅತ್ಯಂತ ಪ್ರಮುಖ ತೊಂದರೆ ಆಗಿದೆ. ಬೆಳೆಗಳು ಬೆಳೆದ ನಂತರ ಆ ಒಂದು ಬೆಳೆಯನ್ನು ಅವರು ಮನೆಗೆ ಅಥವಾ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಎದುರಾಗುವ ಅಡಚಣೆಗಳು ಈಗ ರೈತರು ಶ್ರಮವನ್ನು ಮತ್ತಷ್ಟು ಹೆಚ್ಚಿಗೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಈಗ ಮಳೆಗಾಲದಲ್ಲಿ ಒಂದು ಸಮಸ್ಯೆಯನ್ನು ಗಂಭೀರವಾಗುತ್ತದೆ. ಹಾಗೆ ಟ್ರ್ಯಾಕ್ಟರ್ ಗಳು ಕೆಸರಿನಲ್ಲಿ ಸಿಲುಕಿ ನಿಲ್ಲುತ್ತಾ ಇದೆ. ಹಾಗೆ ಬೆಳೆಗಳನ್ನು ಹೊತ್ತುಕೊಂಡು ಸಾಗಬೇಕಾದಂತ ಪರಿಸ್ಥಿತಿ ಈಗ ರೈತರಿಗೆ ಬರುತ್ತಾ ಇದೆ.

ಈಗ ಈ ಒಂದು ಸಂಕಷ್ಟವನ್ನು ಶಾಶ್ವತವಾಗಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಈಗ ನಮ್ಮ ಸರ್ಕಾರವು ರೈತರಿಗಾಗಿ ವಿಶೇಷ ಯೋಜನೆಯನ್ನು ಜಾರಿಗೆ ಮಾಡಿದ್ದು. ಈ ಒಂದು ಯೋಜನೆ ಮೂಲಕ ಈಗ ನಮ್ಮ ರೈತರು ತಮ್ಮ ಜಮೀನಿಗೆ ಉಪಯುಕ್ತವಾದಂತ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಲು ಸರಕಾರವು ಸಹಾಯಧನದೊಂದಿಗೆ ಮಾಡಿಸಿಕೊಳ್ಳುವ ಅವಕಾಶವನ್ನು ನೀಡುತ್ತಾ ಇದೆ. ನೀವು ಕೂಡ ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ನಿಮ್ಮ ಹೊಲಕ್ಕೆ ದಾರಿಗಳನ್ನು ಮಾಡಿಕೊಳ್ಳಬಹುದು.
ನಮ್ಮ ಹೊಲ ನಮ್ಮ ದಾರಿ
ಈಗ ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಮ್ಮ ಹೊಲ ನಮ್ಮ ದಾರಿ ಕಾರ್ಯಕ್ರಮವನ್ನು ಬಿಡುಗಡೆ ಮಾಡಿದೆ. ಅದೇ ರೀತಿ ರೈತರು ತಮ್ಮ ಹೊಲಗಳಿಗೆ ಸುಲಭವಾಗಿ ಓಡಾಡಲು ಕೃಷಿಯಂತ್ರೋಪಕರಣಗಳನ್ನು ಸಾಗಿಸಲು ಅಷ್ಟೇ ಅಲ್ಲದೆ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಅನುಕೂಲವಾಗುವ ಸಲುವಾಗಿ ಈಗ ಕಾಲು ದಾರಿ ಅಥವಾ ಬಂಡಿದಾರಿ ನಿರ್ಮಿಸುವುದೇ ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ದೊರೆಯುವ ಹಣೆ ಎಷ್ಟು?
ಈಗ ಈ ಒಂದು ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಆಗುವ ವೆಚ್ಚವನ್ನು ಈಗ ಪಂಚಾಯತ್ ಇಂಜಿನಿಯರ್ಗಳು ಅಂದಾಜು ಪಟ್ಟಿ ಮೂಲಕ ನಿರ್ಧಾರ ಮಾಡುತ್ತಾರೆ, ರಸ್ತೆ ಉದ್ದ ಮತ್ತು ಅಗಲದ ಆಧಾರದ ಮೇಲೆ ಗರಿಷ್ಠವಾಗಿ 12.50 ಲಕ್ಷದವರೆಗೆ ಈಗ ಅನುದಾನವನ್ನು ಈಗ ಈ ಒಂದು ಯೋಜನೆ ಮೂಲಕ ಮಂಜೂರು ಮಾಡಲಾಗುತ್ತದೆ.
ಅಷ್ಟೇ ಅಲ್ಲದೆ ಈ ಒಂದು ರಸ್ತೆಗಳು ಸಂಪೂರ್ಣ ಡಾಂಬರ್ ಅಥವಾ ಕಾಂಕ್ರೀಟ್ ಆಗಿರದೆ ಜಲ್ಲಿ ಮತ್ತು ಮಣ್ಣಿನಿಂದ ಬಲಿಷ್ಠವಾಗಿ ನಿರ್ಮಾಣ ಮಾಡಲ್ಪಡುತ್ತವೆ. ಹಾಗೆ ಇವು ಟ್ರ್ಯಾಕ್ಟರ್ ಮತ್ತು ಇತರ ಕೃಷಿ ವಾಹನಗಳು ಸುಲಭವಾಗಿ ಓಡಾಡುವಂತೆ ನಿರ್ಮಾಣ ಮಾಡಿಕೊಡಲಾಗುತ್ತದೆ.
ಯಾರಿಗೆಲ್ಲ ಆದ್ಯತೆ
ಈಗ ಈ ಒಂದು ಸರ್ಕಾರದ ಅನುದಾನದ ಸೀಮಿತವಾಗಿರುವುದರಿಂದ ಎಲ್ಲಾ ಅರ್ಜಿಗಳಿಗೆ ಒಂದೇ ಬಾರಿ ಮಂಜುರಾತಿ ದೊರೆಯುವುದಿಲ್ಲ. ಆದ್ದರಿಂದ ಸರ್ಕಾರವು ಕೆಲವೊಂದಷ್ಟು ವರ್ಗಗಳಿಗೆ ಮೊದಲ ಆದ್ಯತೆಗಳನ್ನು ಈಗ ನೀಡುತ್ತಾ ಇದೆ.
ಹಾಗೆ ಈಗ ಸಣ್ಣ ಮತ್ತು ಅತಿ ಸಣ್ಣ ರೈತರು ಒಬ್ಬರು ಬದಲು ಹಲವು ರೈತರು ಸೇರಿಕೊಂಡು ಸಾಮೂಹಿಕ ರಸ್ತೆಗಾಗಿ ಅರ್ಜಿ ಸಲ್ಲಿಸಿದವರು. ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಈಗ ಈ ಒಂದು ರಸ್ತೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಇತ್ತೀಚಿನ ಪಹಣಿ
- ಉದ್ಯೋಗ ಖಾತ್ರಿ ಚೀಟಿಗಳು
- ಬ್ಯಾಂಕ್ ಖಾತೆ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರಸ್ತೆ ನಿರ್ಮಿಸಬೇಕಾದ ಜಾಗದ ನಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಈಗ ರೈತರ ತಮ್ಮ ಗ್ರಾಮ ಪಂಚಾಯಿತಿ ಕಚೇರಿಯ ತೆರಳಿ ಅಲ್ಲಿರುವ PDO ಅವರಿಗೆ ಲಿಖಿತ ಮನವಿಯನ್ನು ಸಲ್ಲಿಕೆ ಮಾಡಿ. ಈ ಒಂದು ಅರ್ಜಿಯನ್ನು ಈಗ ಗ್ರಾಮಸಭೆಯಲ್ಲಿ ಚರ್ಚೆ ಮಾಡಿ ಅನುಮೋದಿಸಿದ ಬಳಿಕ ವಾರ್ಷಿಕವಾಗಿ ಕ್ರಿಯಾ ಯೋಜನೆಯಲ್ಲಿ ಅದನ್ನು ಸೇರಿ ಪಡೆದು ಮಾಡಲಾಗುತ್ತದೆ.
ಹಾಗೆ ಆ ಒಂದು ಕ್ರಿಯ ಯೋಜನೆಯಲ್ಲಿ ಈ ಒಂದು ಆದೇಶವು ಸೇರ್ಪಡೆಗೊಂಡ ನಂತರ ಆ ಒಂದು ರಸ್ತೆ ಕಾಮಗಾರಿಗೆ ಅಧಿಕೃತ ಆದೇಶವನ್ನು ನೀಡಲಾಗುತ್ತದೆ ಹಾಗೆ ಕೆಲಸವನ್ನು ಕೂಡ ಪ್ರಾರಂಭ ಮಾಡಲಾಗುತ್ತದೆ