Gruhalakshmi Yojane: ಗೃಹಲಕ್ಷ್ಮಿ ಬಾಕಿ ಉಳಿದಿರುವ ಹಣ ಜಮಾ! ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!

Gruhalakshmi Yojane: ಗೃಹಲಕ್ಷ್ಮಿ ಬಾಕಿ ಉಳಿದಿರುವ ಹಣ ಜಮಾ! ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!

WhatsApp Float Button

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾರಂಭಿಸಿದಂತಹ 5 ಕಾತರಿ ಯೋಜನೆಗಳ ಅಡಿಯಲ್ಲಿ ಈಗ ಗೃಹಲಕ್ಷ್ಮಿ ಯೋಜನೆ ಈಗ ಅತ್ಯಂತ ಪ್ರಮುಖವಾದಂತಹ ಯೋಜನೆಯಾಗಿದೆ. ಈಗ ಈ ಒಂದು ಯೋಜನೆಯ ಆಗಸ್ಟ್ 2023ರಲ್ಲಿ ಪರಿಚಯಿಸಲಾದಂತಹ ಯೋಜನೆಯ ಆಗಿದೆ. ಈ ಒಂದು ಯೋಜನೆಯ ಮನೆಯ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2000 ಹಣವನ್ನು ನೀಡಲಾಗುತ್ತ ಇದೆ.

Gruhalakshmi Yojane

ಅಷ್ಟೇ ಅಲ್ಲದೆ ಈಗಾಗಲೇ ನಮ್ಮ ರಾಜ್ಯಾದ್ಯಂತ ಸುಮಾರು 1.2ಕೋಟಿ ಮಹಿಳೆಯರಿಗೆ ಈಗಾಗಲೇ ಪ್ರಯೋಜನ ಪಡೆದುಕೊಳ್ಳುತ್ತಾ ಇದ್ದು. ಅಷ್ಟೇ ಅಲ್ಲದೆ ಇತ್ತೀಚಿನ ಪಾವತಿಗಳಲ್ಲಿನ ವಿಳಂಬವು ಈಗ ಫಲಾನುಭವಿಗಳಲ್ಲಿ ಕಳವಳವನ್ನುಂಟು ಮಾಡಿದೆ. ಅದೇ ರೀತಿಯಾಗಿ ಈ ಒಂದು ಸಮಸ್ಯೆಯನ್ನು ಈಗ ಪರಿಹರಿಸುತ್ತಾ. ಹಾಗೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಂತೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬಾಕಿ ಉಳಿದಿರುವ ಹಣದ ಬಗ್ಗೆ ಈಗ ಸ್ಪಷ್ಟವಾದ  ಮಾಹಿತಿ ಒಂದನ್ನು ನೀಡಿದ್ದು. ಆ ಒಂದು ಮಾಹಿತಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ವಿಧಾನಸಭೆಯಲ್ಲಿ ಈ ಯೋಜನೆಯ ವಿಷಯದ ಮಾಹಿತಿ

ಈಗ ಈ ಒಂದು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಪಾವತಿ ಗಳ ವಿಷಯವು ಚರ್ಚೆಗೆ ಪ್ರಮುಖವಾದಂತಹ ವಿಷಯವಾಗಿತ್ತು.

ಮೊದಲಿಗೆ ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪಾವತಿಗಳನ್ನು ಈಗ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿಲ್ಲ ಎಂದು ಬಿಜೆಪಿ ಶಾಸಕರಾದಂತಹ ಮಹೇಶ್ ತೆಂಗಿನ ಕಾಯಿಯವರು ದಾಖಲೆಗಳೊಂದಿಗೆ ಈಗ ಆರೋಪವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಈಗ ಆರಂಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಆಗಸ್ಟ್ 2025ಗಿನ ಎಲ್ಲಾ ಕಂತುಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದು. ಅಧಿಕೃತ ವಾದಂತಹ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಎರಡು ತಿಂಗಳ ಪಾವತಿಗಳು ಬಾಕಿ ಉಳಿದಿವೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹಣದ ವಿಳಂಬಕ್ಕೆ ಕಾರಣಗಳು ಏನು?

ಈಗ ಈ ಒಂದು ಹಣವು ಜಮಾ ಆಗದೆ ಇರಲು ಮುಖ್ಯ ಕಾರಣಗಳು ಏನೆಂದರೆ ಅಪೂರ್ಣ EKYC  ಅಂತಹ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಒಂದು ಹಣವು ಜಮಾ ಆಗುವುದು ತಡವಾಗುತ್ತಾ ಇದೆ.

ಅದೇ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಜೋಡಣೆಯಲ್ಲಿ ಈಗ ತೊಂದರೆಗಳಿರುವುದರಿಂದ ಈ ಒಂದು ಹಣವು ಜಮಾ ಆಗುತ್ತಾ ಇಲ್ಲ.

ಅದೇ ರೀತಿಯಾಗಿ ನಿಮ್ಮ ಆಧಾರ ಕಾರ್ಡ್ ರೇಷನ್ ಕಾರ್ಡ್ ನಲ್ಲಿ ಈ ಒಂದು ಹೆಸರು, ವಿಳಾಸ ಅಥವಾ ಬ್ಯಾಂಕ್ ಮಾಹಿತಿ ಕೂಡ ಹೊಂದಾಣಿಕೆ ಆಗುತ್ತಾ ಇಲ್ಲದೆ ಇರುವುದು ಒಂದು ಸಮಸ್ಯೆಯಾಗಿದೆ.

ಬಾಕಿ ಕಂತಿನ ಬಿಡುಗಡೆಯ ಭರವಸೆ

ಈಗ ಈ ಹಿಂದೆ ಬಾಕಿ ಇರುವಂತ ಕಂತುಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಹಣಕಾಸು ಇಲಾಖೆಯೊಂದಿಗೆ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು ಅಗತ್ಯ ತಾಂತ್ರಿಕ ತಿದ್ದುಪಡಿಗಳು ಪ್ರಕ್ರಿಯೆ ಮುಗಿದ ನಂತರವೇ DBT ಮೂಲಕ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಪಾವತಿಗಳ ವಿಳಂಬದ ಪರಿಣಾಮ ಏನು?

ಈಗ ಗೃಹಲಕ್ಷ್ಮೀ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈಗ ಪ್ರಮುಖ ಆರ್ಥಿಕ ಬೆಂಬಲ ವ್ಯವಸ್ಥೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈ ಒಂದು ವಿಳಂಬದ ತೊಂದರೆಯಿಂದಾಗಿ ದೈನಂದಿನ ಖರ್ಚುಗಳಿಗಾಗಿ ಈ ಮಾಸಿಕ ಸಹಾಯವನ್ನು ಅವಲಂಬಿಸಿರುವ ಅಂತ ಕುಟುಂಬಗಳಿಗೆ ಈಗ ತೊಂದರೆ ಉಂಟಾಗುತ್ತ ಇದೆ.

ಹೊಸ ಅರ್ಜಿಗಳಿಗೆ ಸಲ್ಲಿಕೆ ಮಾಡುವುದು ಹೇಗೆ?

ಈಗ ಇನ್ನೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಿದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ, ಇಲ್ಲವೇ ನಿಮ್ಮ ಹತ್ತಿರ ಇರುವಂತಹ ಗ್ರಾಮ ಒನ್ ಇಲ್ಲ ಸಿಎಸಿ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ನೀವು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿಳಾಸದ ಪುರಾವೆ
  • ರೇಷನ್ ಕಾರ್ಡ್

ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಪ್ರತಿ ತಿಂಗಳು ಆ ಒಂದು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2000 ಹಣವನ್ನು ಸರ್ಕಾರವು ನೇರವಾಗಿ ವಿತರಣೆ ಮಾಡುತ್ತಾ ಇದೆ. ಈ ಒಂದು ಲೇಖನದಲ್ಲಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Comment

error: Content is protected !!