Gruhalakhmi Yojane 23 Installament Credit: ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?
ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಈಗ ಅತ್ಯಂತ ಪ್ರಚಲಿತದಲ್ಲಿರುವಂತಹ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಈಗ ಈ ಒಂದು ಯೋಜನೆಯ ಮೂಲಕ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗಾಗಲೇ ಕಳೆದ ಕೆಲವು ತಿಂಗಳಿಂದ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗದ ಕಾರಣ ಪ್ರತಿಯೊಬ್ಬ ಮಹಿಳೆಯರು ಈಗ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ.

ಆದರೆ ಈಗ ಸರ್ಕಾರವು ನೀಡಿರುವಂತಹ ಮಾಹಿತಿ ಪ್ರಕಾರ ನವೆಂಬರ್ ಅಂದರೆ ನೆನ್ನೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ರಾಜ್ಯದ 1.27 ಕೋಟಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈ ಒಂದು ಹಣದ ಬಿಡುಗಡೆ ಈಗ ಕೇವಲ ಹಣವಲ್ಲ. ಈಗ ಮಹಿಳೆಯರ ಸಬಲೀಕರಣದ ಹೊಸ ಹಂತವಾಗಿದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಲೇಖನದ ಮೂಲಕ ಈಗ ನೀವು ಸಂಪೂರ್ಣವಾದಂತಹ ಮಾಹಿತಿಯನ್ನು ಈಗ ಪಡೆದುಕೊಳ್ಳಬಹುದಾಗಿದೆ.
23ನೇ ಕಂತಿನ ಹಣ ಬಿಡುಗಡೆ
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಕರ್ನಾಟಕದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಚುನಾವಣಾ ಭರವಸೆಯಾಗಿ ಈಗ 2023 ರಲ್ಲಿ ಪ್ರಾರಂಭ ಮಾಡಲಾಗಿತ್ತು. ಈ ಒಂದು ಯೋಜನೆ ಅಡಿಯಲ್ಲಿ ಈಗ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬದ ಯಜಮಾನೀಯ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಅಷ್ಟೇ ಅಲ್ಲದೆ ಇದು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉದ್ದೇಶದಿಂದಾಗಿ ರೂಪಿಸಲ್ಪಟ್ಟಂತಹ ಯೋಜನೆ ಇದಾಗಿದೆ. ಈಗಾಗಲೇ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ 22ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು. ಅಂದರೆ ಸುಮಾರು 44,000 ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ 23ನೇ ಕಂತಿನ ಹಣ ನಿನ್ನೆ ಬಿಡುಗಡೆಯಾಗಿದ್ದು. ಇನ್ನು ಎರಡು ಮೂರು ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಂದು ಜಮಾ ಆಗುತ್ತದೆ.
ಬಾಕಿ ಹಣದ ಮಾಹಿತಿ
ಈಗ 23ನೇ ಕಂತಿನ ಹಣ ಬಿಡುಗಡೆಯಾಗಿದ್ದು. ಇನ್ನೂ ಕೆಲವೇ ದಿನಗಳಲ್ಲಿ ಪೆಂಡಿಂಗ್ ಇರುವಂತಹ ಹಣವನ್ನು ಕೂಡ ಈಗ ಅಂದರೆ ಸುಮಾರು 6000 ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಡಿಸೆಂಬರ್ ಅಂತ್ಯದೊಳಗಾಗಿ ಪ್ರತಿಯೊಬ್ಬ ಮನೆಯ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ. ಅದೇ ರೀತಿಯಾಗಿ ಈ ಒಂದು ಹಣ ಜಮಾ ಆಗದೆ ಇರಲು ಈಗ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಈ ಒಂದು ಹಣ ಬಿಡುಗಡೆಯಾಗುವುದು ತಡವಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಹಣ ಬರದೇ ಇದ್ದರೆ ಈ ನಿಯಮ ಕಡ್ಡಾಯ!
- ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗದೆ ಇದ್ದರೆ ನೀವು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು.
- ಆನಂತರ ನಿಮ್ಮ ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷ ಕಳೆದಿದ್ದರೆ ಅದನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕಾಗುತ್ತದೆ.
- ತದನಂತರ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ ಹಾಗೆ ಕೆವೈಸಿ ಮಾಡಿಸಬೇಕು.
ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
ಈಗ ನೀವೇನಾದರೂ ಈ ಒಂದು ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಈಗ ನೀವು ಕೂಡ ನಿಮ್ಮ ಹಣದ ಸ್ಟೇಟಸ್ ಅನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಖಾತೆಗೆ ಈ ಹಣ ಜಮಾ ಆಗದಿದ್ದರೂ ಕೂಡ ಇನ್ನು ಎರಡು ಮೂರು ದಿನಗಳಲ್ಲಿ ಈ ಒಂದು ಹಣವು ನಿಮ್ಮ ಖಾತೆಗೆ ಬಂದು ಜಮಾ ಆಗುವ ಸಾಧ್ಯತೆ ಇದೆ.
LINK : Check Now