Bele Parihara Amount Credit: ಬೆಳೆ ಪರಿಹಾರದ ಹಣ ಬಿಡುಗಡೆ! ಕೂಡಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?
ಈಗ ಈ ಒಂದು ಬೆಳೆ ಹಾನಿ ಪರಿಹಾರದ ಹಣವು ಈಗ ರೈತರ ಖಾತೆಗಳಿಗೆ ಜಮಾ ಆಗಿದೆ. ಈಗ ನಿಮ್ಮ ಖಾತೆಗು ಕೂಡ ಹಣ ಬಂದಿಲ್ಲವೇ ಆಗಿದ್ದರೆ ಈ ಕೆಲಸಗಳನ್ನು ಮಾಡಿ. ಈಗ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ನಲ್ಲಿ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಸುರಿದಂತ ಹೆಚ್ಚಾದ ಮಳೆಯಿಂದಾಗಿ ರೈತರ ಬೆಳೆಗಳಲ್ಲಿ ತುಂಬಾ ಪ್ರಮಾಣದಲ್ಲಿ ನಷ್ಟವಾಗಿದೆ. ಅದೇ ರೀತಿಯಾಗಿ ಈಗ ರಾಗಿ, ತೊಗರಿ, ಭತ್ತ, ತರಕಾರಿ, ಜೋಳ, ತೋಟಗಾರಿಕಾ ಬೆಳೆಗಳನ್ನು ಕೂಡ ಎಲ್ಲವೂ ನೀರಿನಲ್ಲಿ ಮುಳುಗಿ ರೈತರು ಲಕ್ಷಾಂತರ ಹಣವನ್ನು ನಷ್ಟ ಅನುಭವಿಸಿದ್ದಾರೆ.

ಅದೇ ರೀತಿಯಾಗಿ ಈ ಒಂದು ಹಿನ್ನೆಲೆಯಲ್ಲಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಳೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಲು ಈಗ ಮುಂದಾಗಿವೆ. ಈಗ 2025ರ ನವೆಂಬರ್ ತಿಂಗಳ ವೇಳೆಗೆ ಈಗ ಈ ಒಂದು ಪ್ರಕ್ರಿಯೆ ತೀವ್ರಗತಿಯಲ್ಲಿ ಪ್ರಾರಂಭವಾಗಿದ್ದು. ಈಗಾಗಲೇ ಕೆಲವು ಜಿಲ್ಲೆಗಳ ರೈತರ ಖಾತೆಗಳಿಗೆ ಹಣ ಜಮಾ ಹಾಗೂ ಪ್ರಕ್ರಿಯೆ ಪ್ರಾರಂಭವಾಗಿದೆ. ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ರೈತರ ಖಾತೆಗಳಿಗೆ ಹಣವು ಜಮಾ ಆಗಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಫ್ರೂಟ್ಸ್ ನಲ್ಲಿ ನೊಂದಣಿ ಮಾಡದೆ ಇರುವುದು. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಹಾಗೂ ದಾಖಲೆಗಳಲ್ಲಿ ಇರುವಂತಹ ತಾಂತ್ರಿಕ ತೊಡಕುಗಳಿಂದ ಈ ಒಂದು ಯೋಜನೆ ಹಣವು ಬಂದು ಜಮಾ ಆಗಿಲ್ಲ.
ಈಗ ಈ ಒಂದು ಬೆಳೆ ಪರಿಹಾರದ ಹಣವು ಜಮಾ ಆಗದೇ ಇದ್ದರೆ ನೀವು ಏನು ಮಾಡಬೇಕು ಹಾಗೂ ಏನೆಲ್ಲಾ ಕೆಲಸಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ದೊರೆಯುವ ಪರಿಹಾರ ಹಣ ಎಷ್ಟು?
ಈಗ ಈ ಒಂದು ಕೇಂದ್ರ ಸರ್ಕಾರವು NDRF ಮಾರ್ಗ ಸೂಚಿ ಮತ್ತು ರಾಜ್ಯ ಸರ್ಕಾರ ಹೆಚ್ಚುವರಿ ನೆರವಿನೊಂದಿಗೆ ಈ ಬಾರಿ ರೈತರಿಗೆ ಈಗ ಹೆಚ್ಚಿನ ಮಟ್ಟದಲ್ಲಿ ಈಗ ಈ ಒಂದು ಬೆಳೆ ಪರಿಹಾರ ಧನವನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಈಗ ಮಳೆ ಆಶ್ರಿತ ಬೆಳೆಗಳಿಗೆ ಈಗ 17,000 ಹಣವನ್ನು ನೀಡಲಾಗುತ್ತದೆ ಹಾಗೂ ನೀರಾವರಿ ಬೆಳೆಗಳಿಗೆ 25,000 ಅಷ್ಟೇ ಅಲ್ಲದೆ ಬಹು ವಾರ್ಷಿಕ ಮತ್ತು ತೋಟಗಾರಿಕಾ ಬೆಳೆಗಳಿಗೆ 31,000 ದವರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಅದೇ ರೀತಿಯಾಗಿ ಈಗಾಗಲೇ ಕೇಂದ್ರ ಸರ್ಕಾರವು 391 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು. ಈಗ ನಮ್ಮ ರಾಜ್ಯ ಸರ್ಕಾರ ತಾನು ಹೇಳಿದಂತಹ ಹಣವನ್ನು ಈಗ ಅದಕ್ಕೆ ಒಟ್ಟುಗೂಡಿಸಿ DBT ಮೂಲಕ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಿದೆ.
ಯಾವ ಜಿಲ್ಲೆಗಳಿಗೆ ಹಣ ಜಮಾ!
ಈಗ ನವೆಂಬರ್ 2025 ರ ಮಧ್ಯದ ವೇಳೆಗೆ ಈ ಒಂದು ಕೆಳಗೆ ತಿಳಿಸಿರುವ ಪ್ರತಿಯೊಂದು ಜಿಲ್ಲೆಗಳಲ್ಲಿ ಪರಿಹಾರ ಧನವು ಜಮಾ ಹಾಗೂ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂದರೆ ಈಗ ಯಾದಗಿರಿ, ಕಲಬುರ್ಗಿ, ಬೆಳಗಾವಿ, ವಿಜಯಪುರ, ಬೀದರ್, ರಾಯಚೂರು, ಗದಗ, ಬಳ್ಳಾರಿ ಈ ಒಂದು ಜಿಲ್ಲೆಗಳಿಗೆ ಈಗ ಈ ಒಂದು ಬೆಳೆ ಪರಿಹಾರದ ಹಣವು ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದೇ ರೀತಿಯಾಗಿ ಇನ್ನು ಉಳಿದ ಅಂತ ಜಿಲ್ಲೆಗಳಲ್ಲೂ ಕೂಡ ಇನ್ನೂ ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಈ ಒಂದು ಬೆಳೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈಗ ನವೆಂಬರ್ 20, 21 ರಂದು ಈಗ ಯಾದಗಿರಿ ಜಿಲ್ಲೆಯ ಒಡಗಿರಿ ತಾಲೂಕು ಮತ್ತು ಯಾದಗಿರಿ ಜಿಲ್ಲೆ ವಿವಿಧ ತಾಲೂಕುಗಳಲ್ಲಿ ಈಗ ಪ್ರತಿಯೊಬ್ಬ ರೈತರ ಖಾತೆಗಳಿಗೂ ಕೂಡ ಬೆಳೆ ಪರಿಹಾರ ಧನವು ಈಗ 16,000 ಹಣ ಈಗಾಗಲೇ ಬಿಡುಗಡೆಯಾಗಿದೆ.
ಅಷ್ಟೇ ಅಲ್ಲದೆ ಈಗ ಇನ್ನು ಕೆಲವೇ ದಿನಗಳಲ್ಲಿ ಇನ್ನು ಉಳಿದ ಗದಗ, ಬೆಳಗಾವಿ, ವಿಜಯಪುರ ಮುಂತಾದ ಜಿಲ್ಲೆಗಳಿಗೂ ಕೂಡ ಈಗಾಗಲೇ ಈ ಒಂದು ಹಣವು ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದ್ದು. ಇನ್ನು ಉಳಿದಂತ ಪ್ರತಿಯೊಂದು ಜಿಲ್ಲೆಗಳಿಗೂ ಕೂಡ ಕೆಲವೇ ದಿನಗಳಲ್ಲಿ ಈ ಒಂದು ಹಣವು ಬಂದು ತಲುಪುತ್ತದೆ.
ಹಣ ಬರದಿದ್ದರೆ ಈ ಕೆಲಸಗಳು ಕಡ್ಡಾಯ!
- ಮೊದಲಿಗೆ ನೀವು ಫ್ರೂಟ್ಸ್ ಪೋರ್ಟಲ್ ನಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕು.
- ಆನಂತರ ನೀವು ಕಡ್ಡಾಯವಾಗಿ EKYC ಅನ್ನು ಪೂರ್ಣಗೊಳಿಸಬೇಕು.
- ತದನಂತರ ನೀವು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗನ್ನು ಮಾಡಿಸಬೇಕು.
- ಆನಂತರ ನೀವು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆರ್ ಟಿ ಸಿ ಯಲ್ಲಿ ಒಂದೇ ತರ ಹೆಸರು ಇರಬೇಕಾಗುತ್ತದೆ.
- ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
- ಈಗ ಮೊದಲಿಗೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಹಾಗೂ FID ನಂಬರ್ ಅನ್ನು ಎಂಟರ್ ಮಾಡಿ.
- ಆನಂತರ ನೀವು ಅರ್ಹ ಪಟ್ಟಿ ಮೇಲೆ ಕ್ಲಿಕ್ ಮಾಡಿ ಅಥವಾ ಪರಿಹಾರದ ಮೊತ್ತದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ.
Link : Check Now