Bele Parihara Amount Released: ರೈತರಿಗೆ ಬೆಳೆ ಪರಿಹಾರದ ಹಣ ಜಮಾ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?
ಈಗ ಕರ್ನಾಟಕದ ಸಮಸ್ತ ರೈತರಿಗೆ ಈಗ ತಿಳಿಸುವುದೇನೆಂದರೆ ಈ ಒಂದು ವರ್ಷದ 2025 ಮತ್ತು 26 ನೇ ಸಾಲಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಆದಂತಹ ಮಳೆಯಿಂದ ನಮ್ಮ ರಾಜ್ಯದ ಹಲವು ಜಿಲ್ಲೆಗಳಿಗೆ ಈಗ ಬೆಳೆ ಹಾನಿ ಉಂಟಾಗಿದೆ. ಇದರಿಂದ ಈಗ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು. ಇದಕ್ಕೆ ಸಂಬಂಧಿಸಿದಂತೆ ಈಗ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಬೆಳೆ ಹಾನಿಗಳಿಗೆ ಈಗ ನಷ್ಟ ಪರಿಹಾರವಾಗಿ ಬೆಳೆಯ ಪರಿಹಾರ ಧನವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದ್ದವು.

ಇದೀಗ ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ರೈತರ ಖಾತೆಗಳಿಗೆ ಈಗ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಪ್ರಾರಂಭ ಮಾಡಿದ್ದು. ಇದಕ್ಕೆ ಸಂಬಂಧಿಸಿ ದಂತ ಹೊಸ ಅಪ್ಡೇಟ್ಗಳು ಬಂದಿದ್ದು. ಈಗ ರೈತರು ಈ ಒಂದು ಹಣವನ್ನು ಪಡೆಯಲು ಈಗ ಕಡ್ಡಾಯವಾಗಿ ಈ ಒಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಪಾಲಿಸದೆ ಇದ್ದರೆ ಅವರು ಈ ಒಂದು ಹಣವನ್ನು ಪಡೆಯಲು ಆಗುವುದಿಲ್ಲ. ಆ ಒಂದು ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಳೆ ಪರಿಹಾರದ ಮಾಹಿತಿ
ಈಗ ನಿಮಗೆ ತಿಳಿದಿರುವಂತೆ ಈ ವರ್ಷ ನಮ್ಮ ಕರ್ನಾಟಕದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದಾಗಿ ನಮ್ಮ ವಿವಿಧ ಭಾಗಗಳಲ್ಲಿ ಮತ್ತು ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ರೈತರು ತಾವು ಬೆಳೆದಂಥ ಬೆಳೆ ಹಾನಿ ಉಂಟಾಗಿದ್ದು. ಅಂತಹ ರೈತರಿಗೆ ಈಗ ಆರ್ಥಿಕವಾಗಿ ತುಂಬಾ ನಷ್ಟ ಉಂಟಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅದಕ್ಕಾಗಿ ಈಗ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ರೈತರಿಗೆ ಭರವಸೆಯನ್ನು ನೀಡುವ ಉದ್ದೇಶದಿಂದ ಹಾಗೂ ಅಲ್ಪ ಪ್ರಮಾಣದಲ್ಲಿ ಆದರೂ ಕೂಡ ಅವರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಈ ಒಂದು ಪರಿಹಾರವನ್ನು ಘೋಷಣೆ ಮಾಡಿವೆ. ಈ ಒಂದು ಪರಿಹಾರದ ಅಡಿಯಲ್ಲಿ ಈಗ ನಮ್ಮ ರಾಜ್ಯಕ್ಕೆ ಸುಮಾರು 391 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು. ಹಾಗೆ ನಮ್ಮ ರಾಜ್ಯ ಸರ್ಕಾರವೂ ಕೂಡ ರೈತರಿಗೆ ಸುಮಾರು 8,500 ಹಣವನ್ನು ಘೋಷಣೆ ಮಾಡಿದೆ.
ರೈತರಿಗೆ ದೊರೆಯುವ ಹಣ ಎಷ್ಟು?
ಈಗ ಮಳೆ ಅವಲಂಬಿತ ಬೆಳೆಗಳಿಗೆ ಈಗ ರೈತರು ಬೆಳೆದಂತೆ ಬೆಳೆಗಳು ಮಳೆಯ ಅವಲಂಬಿತ ಬೆಳೆಗಳಾಗಿದ್ದಾರೆ. ಅಂತಹ ಬೆಳೆಗಳಿಗೆ ಈಗ ಪ್ರತಿ ಹೆಕ್ಟರ್ ಗೆ ಸುಮಾರು 17,000 ದವರೆಗೆ ಬೆಳೆ ಪರಿಹಾರ ಧನವನ್ನು ನೀಡಲಾಗುತ್ತದೆ.
ಹಾಗೆ ಒಂದು ವೇಳೆ ರೈತರು ಬೆಳೆದ ಬೆಳೆಗಳು ದೀರ್ಘಕಾಲಿಕ ಬೆಳೆಗಳು ಆಗಿದ್ದರೆ. ಅಂತಹ ಬೆಳೆಗಳಿಗೆ ಈಗ ಪ್ರತಿ ಹೆಕ್ಟರ್ ಗೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸೇರಿ ಸುಮಾರು 31,000 ವರೆಗೆ ಬೆಳೆ ಪರಿಹಾರ ಹಣವನ್ನು ಪಡೆದುಕೊಳ್ಳಬಹುದು.
ಹಾಗೆ ಈಗ ರೈತರು ಬೆಳೆದ ಬೆಳೆಗಳು ಒಂದು ವೇಳೆ ನೀರಾವರಿ ಅವಲಂಬಿತ ಬೆಳೆಗಳಾಗಿದ್ದರೆ. ಅಂತಹ ಪ್ರದೇಶದಲ್ಲಿ ಬೆಳೆದಿರುವಂತಹ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ ಈಗ ಸರ್ಕಾರದ ಕಡೆಯಿಂದ ಸುಮಾರು 25,000 ರವರೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು.
ಪರಿಹಾರ ಹಣ ಪಡೆಯಲು ಈ ಕೆಲಸ ಕಡ್ಡಾಯ!
ಮೊದಲಿಗೆ ರೈತರು ಈ ಒಂದು ಬೆಳೆ ಹಾನಿ ಪರಿಹಾರವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ತಮ್ಮ ಜಮೀನು ದಾಖಲಾತಿಗಳ ಪ್ರಮಾಣ ಪತ್ರಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ಜಮೀನಿನ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇದ್ದರೆ ಅದನ್ನು ಕಡ್ಡಾಯವಾಗಿ ಮಾಡಿಸಬೇಕು.
ಆನಂತರ ರೈತರು ಬೆಳೆದ ಪರಿಹಾರ ಪಡೆಯಲು ಈಗ ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇರಬೇಕಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಹಾಗೂ NPCI ಮ್ಯಾಪಿಂಗ್ ಆಗದಿದ್ದರೆ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.
ಆನಂತರ ರೈತರ ಬೆಳೆ ಪರಿಹಾರ ಹಣವನ್ನು ಪಡೆಯಲು ಈಗ ಕಡ್ಡಾಯವಾಗಿ ಅವರು FRUITS ತಂತ್ರಾಂಶದಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕಾಗುತ್ತದೆ. ಹಾಗೆ FID ನಂಬರನ್ನು ಕ್ರಿಯೇಟ್ ಮಾಡಿರಬೇಕು. ಒಂದು ವೇಳೆ ಅದನ್ನು ಮಾಡಿಸದಿದ್ದರು ಕೂಡ ಈ ಒಂದು ಯೋಜನೆ ಹಣ ಬಂದ ತಲುಪುವುದಿಲ್ಲ.
ಬೆಳೆ ಪರಿಹಾರ ಹಣ ಯಾವಾಗ ಜಮಾ!
ಈಗಾಗಲೇ ನಮಗೆ ತಿಳಿದ ಮಾಹಿತಿ ಪ್ರಕಾರ ಈ ಒಂದು ಕೆಲವೊಂದು ಜಿಲ್ಲೆಗಳಲ್ಲಿ ಈಗಾಗಲೇ ರೈತರ ಖಾತೆಗಳಿಗೆ ಈ ಒಂದು ಬೆಳೆ ಪರಿಹಾರ ಹಣ ಜಮಾ ಮಾಡಲು ಪ್ರಾರಂಭ ಮಾಡಿದ್ದು. ಅದೇ ರೀತಿಯಾಗಿ ಈಗ ಬೀದರ್ ಮತ್ತು ಬೆಳಗಾವಿ ಹಾಗೂ ಗದಗ ಜಿಲ್ಲೆ ರೈತರ ಖಾತೆಗಳಿಗೆ ಬಿಡುಗಡೆ ಪ್ರಾರಂಭ ಮಾಡಲಾಗಿದೆ. ಇನ್ನುಳಿದಂತ ರೈತರಿಗೂ ಕೂಡ ಈಗ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಬೆಳೆ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಲಾಗಿದೆ.
ಈಗ ಈ ಒಂದು ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಈಗ ಕೆಲವೊಂದಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದ ಕಾರಣ ಇನ್ನು 15 ದಿನದ ಒಳಗಾಗಿ ಪ್ರತಿಯೊಬ್ಬರು ಇತರ ಖಾತೆಗಳಿಗೆ ಈ ಒಂದು ಬೆಳೆ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಈಗ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಮಾಹಿತಿ ನೀಡಿದ್ದಾರೆ. ಆದರೆ ಈ ಒಂದು ಹಣವನ್ನು ಪಡೆಯಲು ಕಡ್ಡಾಯವಾಗಿ ರೈತರು ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಕಡ್ಡಾಯವಾಗಿ ಮಾಡಿರಲೇಬೇಕು. ಆಗ ಮಾತ್ರ ಅವರು ಕೂಡ ಈ ಒಂದು ಪರಿಹಾರದ ಹಣವನ್ನು ಪಡೆದುಕೊಳ್ಳಬಹುದು.